ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ನ್ಯಾಯಾಲಯದ ‌ಆದೇಶದ ಮೇರೆಗೆ ಹೂತಿದ್ದ ಶವ ಹೊರ ತೆಗೆದು ಮರು ಪರೀಕ್ಷೆ

Published 8 ಮೇ 2024, 13:17 IST
Last Updated 8 ಮೇ 2024, 13:17 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ನವೆಂಬರ್ ತಿಂಗಳಲ್ಲಿ ಮೃತಪಟ್ಟು ಅಂತ್ಯ ಸಂಸ್ಕಾರವಾಗಿದ್ದ ಮಹಿಳೆಯ ಶವವನ್ನು ನ್ಯಾಯಾಲಯದ ಆದೇಶದ ಮೇರೆಗೆ ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ, ಸಮ್ಮುಖದಲ್ಲಿ ಮಂಗಳವಾರ ಶವ ಹೊರ ತೆಗೆದು, ಶವದ ಬಿಡಿ ಭಾಗಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ಲಕ್ಷ್ಮಮ್ಮ(55) ತನ್ನ ಹಿರಿಯ ಮಗನ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದರು. ಇದು ಸಹಜ ಸಾವಲ್ಲ ನನ್ನ ಸಹೋದರ ಮತ್ತು ಅವರ ಸೇರಿ ಪತ್ನಿ ಕೊಲೆ ಮಾಡಿದ್ದಾರೆಂದು ಮೃತರ ಎರಡನೇ ಪುತ್ರ ಪ್ರೇಮ್ ಕುಮಾರ್, ಪತ್ನಿ ಮಮತಾ, ಸಹೋದರಿ ಮಮತಾ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರೇಹಳ್ಳಿ ಪೊಲೀಸರು ಮರಣೊತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಮರಣೊತ್ತರ ಪರೀಕ್ಷೆ ವರದಿ ಬಂದ ನಂತರ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎರಡನೇ ಪುತ್ರ ಪ್ರೇಮ್ ಕುಮಾರ್, ತನ್ನ ತಾಯಿಯದ್ದು ಸಹಜ ಸಾವಲ್ಲ ಇದು ಕೊಲೆ. ಅಣ್ಣ ಅತ್ತಿಗೆ ಸೇರಿ ನಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿ, ಕ್ರಿಮಿನಾಶಕ ಬಾಯಿಗೆ ಹಾಕಿ ಅವರೇ ಆತ್ಮಹತ್ಯೆ ಮಾಡಿ ಕೊಂಡ ರೀತಿ ಬಿಂಬಿಸಿ ನಾಟಕವಾಡಿದ್ದಾರೆ ಎಂದು ಮತ್ತೊಮ್ಮೆ 2024ರ ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದರು. ಹಾಗೂ ಪುನ: ಶವದ ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಮಾತನಾಡಿ, ಮತ್ತೊಮ್ಮೆ ಶವದ ಪರೀಕ್ಷೆ ನಡೆಸುವಂತೆ ನ್ಯಾಯಾಲಯದಿಂದ ಆದೇಶ ಬಂದ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರ ಮತ್ತು ಇಲಾಖೆ ಅಧಿಕಾರಿಗಳ ಸಮಾಕ್ಷಮದಲ್ಲಿ ಶವವನ್ನು ಹೊರ ತೆಗೆದು ಮರಣೊತ್ತರ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ದೇಹದ ಬಿಡಿ ಭಾಗಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ತಹಶೀಲ್ದಾರ್ ಎಂ.ಮಮತಾ, ಪೊಲೀಸ್ ವೃತ್ತ ನಿರೀಕ್ಷಕ ಜಯರಾಂ, ಪಿಎಸ್‌ಐ ಲಿಂಗರಾಜು ಮತ್ತು ಮೃತ ಲಕ್ಷ್ಮಮ್ಮ ಕುಟುಂಬದವರು ಹಾಗೂ ಗ್ರಾಮಸ್ಥರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT