ಶುಕ್ರವಾರ, ಡಿಸೆಂಬರ್ 4, 2020
22 °C
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಗ್ರಹ

ಅಂಬೇಡ್ಕರ್ ಕೃತಿ ಕನ್ನಡ ಅನುವಾದ ಲೋಪ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು-ಬರಹಗಳು ಕೃತಿಯ ಕನ್ನಡ ಅನುವಾದದಲ್ಲಿನ ದೋಷ ಹಾಗೂ ಕೈ ಬಿಟ್ಟಿರುವ ಸಂಗತಿಗಳನ್ನು ಸೇರಿಸಿ ಪುಸ್ತಕ ಪ್ರಕಟಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ. ಎನ್. ರಮೇಶ್ ಆಗ್ರಹಿಸಿದರು.

ಅಂಬೇಡ್ಕರ್ ಅವರ ಬದುಕು ಮತ್ತು ಬರಹದ ಕೃತಿಗಳನ್ನು ಪುನರ್ ಮುದ್ರಿಸುವ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಅಂಬೇಡ್ಕರ್ ಅವರ ಸಂದೇಶಗಳು, ಮಾರ್ಗದರ್ಶನ ತಳಮಟ್ಟದ ಪ್ರಜೆಗೂ ಸತ್ಯಮಾರ್ಗದಲ್ಲಿ ತಲುಪಬೇಕಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

2015ರಲ್ಲಿ ಕನ್ನಡದಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ ಬದುಕು-ಬರಹಗಳು ಕೃತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಅವರ ಎರಡು ಪ್ರಮುಖ ಕೃತಿಗಳನ್ನೇ ಇಲ್ಲಿ ಹೆಸರಿಸಿಲ್ಲ. ಮೊದಲ ಪತ್ನಿ ರಮಾಬಾಯಿಗಾಗಿ ಅಂಬೇಡ್ಕರ್ ಬರೆದ ಕೃತಿಯನ್ನು ಸೇರಿಸಿಲ್ಲ. ಯಾರದೋ ಕಣ್ತಪ್ಪಿನಿಂದ ಆಗಿರುವ ಪ್ರಮಾದವಲ್ಲ. ಉದ್ದೇಶಪೂರ್ವಕವಾಗಿದಯೇ ತಪ್ಪು ಸಂದೇಶ ರವಾನಿಸಲಾಗಿದೆ ಎಂದು ಆರೋಪಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಯಚಂದ್ರ ಗುಪ್ತ, ಡಾ. ಶ್ರೀನಿವಾಸ್‍ಗೌಡ, ಎಚ್.ಎನ್. ನಾಗೇಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.