ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಓರಗಲ್ ಬೆಟ್ಟದ ಮೇಲೆ ನೆಲೆಸಿರುವ ಓರಗಲ್ ತಿಮ್ಮಪ್ಪ ಸ್ವಾಮಿಯ 36ನೇ ವರ್ಷದ ಜಾತ್ರಾ ಮಹೋತ್ಸವನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಭೂಷಣ್ ತಿಳಿಸಿದರು.

ಫೆಬ್ರವರಿ 27 ರಿಂದ ಮಾರ್ಚ್ 1ರವರೆಗೆ ಜಾತ್ರಾ ಮಹೋತ್ಸವ ಜರುಗಲಿದ್ದು ಪ್ರತಿದಿನ ತಿಮ್ಮಪ್ಪ ಸ್ವಾಮಿಗೆ ವಿಶೇಷ ಅಲಂಕಾರ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ವಾಮಿಯ ಜಾತ್ರಾ ಮಹೋತ್ಸವ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಫೆ.27ರ ಮುಂಜಾನೆ ತಿಮ್ಮಪ್ಪ ಸ್ವಾಮಿ ಹಾಗೂ ಬೆಟ್ಟದ ಮತ್ತೊಂದು ಬದಿಯಲ್ಲಿರುವ ಪರ್ವತ ಮಲ್ಲೇಶ್ವರ ಸ್ವಾಮಿಯರ ಮೂಲ ವಿಗ್ರಹಕ್ಕೆ ವಿವಿಧ ಬಗೆಯ ಅಭಿಷೇಕಗಳು ನಾನಾ ಅರ್ಚನೆಗಳು ಭಕ್ತರ ಶ್ರದ್ಧಾಭಕ್ತಿಯೊಂದಿಗೆ ನಡೆಯುತ್ತವೆ. ಬೆಳಗ್ಗೆ 9 ಗಂಟೆಗೆ ಲಕ್ಷ್ಮಿ,ಪದ್ಮಾವತಿ ದೇವಿಯರೊಂದಿಗೆ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ಜರಗಲಿದೆ ಎಂದರು.

28ರಂದು ಪರ್ವತ ಮಲ್ಲೇಶ್ವರ ಸ್ವಾಮಿ ಅವರಿಗೆ ಮಹಾರುದ್ರಾಭಿಷೇಕ ನಡೆಯಲಿದ್ದು, ನಂತರ ಬಿಲ್ವಾರ್ಚನೆ ಸೇರಿದಂತೆ ನಾನಾ ಅರ್ಚನೆಗಳು ನಡೆಯಲಿವೆ. ರಾತ್ರಿ ಸತ್ಯನಾರಾಯಣ ಸ್ವಾಮಿ ಮತ್ತು ಮರಳು ಸಿದ್ದೇಶ್ವರ ಭಜನಾ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1ರಂದು ಓರಗಲ್ ತಿಮ್ಮಪ್ಪ ಸ್ವಾಮಿ ಅವರ ಉತ್ಸವವು ಬೆಟ್ಟದ ಮೇಲೆ ನಡೆಯಲಿದೆ. ಸಾಮೂಹಿಕ ಅನ್ನ ಸಂತರ್ಪಣೆ ನಡೆಯುವುದರೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ದೇವಾಲಯದ ಅಭಿವೃದ್ಧಿ ಸಮಿತಿಯ ಅಶೋಕ್, ಪ್ರಧಾನ ಅರ್ಚಕರಾದ ಪುಟ್ಟರಂಗನಾಥ್, ಕಾಂತರಾಜ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.