ಗುರುವಾರ , ಅಕ್ಟೋಬರ್ 29, 2020
21 °C

ಹಾಸನ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.

ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ನಂತರ ಜಿಟಿಜಿಟಿ ಮಳೆ ಆರಂಭಗೊಂಡು ಸಂಜೆ ರಭಸವಾಗಿ ಸುರಿಯಿತು. ಒಂದು ತಾಸಿಗೂ ಅಧಿಕ ಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಯಿತು. ಹಲವರು ಮಳೆಯಲ್ಲಿಯೇ ತೊಯ್ದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು

ನಗರದ ಕಟ್ಟಿನಕೆರೆ ಮಾರುಕಟ್ಟೆ ತಗ್ಗಿನ ಪ್ರದೇಶಕ್ಕೆ ನೀರು ನುಗ್ಗಿ ವ್ಯಾಪಾರಕ್ಕೆ ಅಡಚಣೆ ಉಂಟಾಯಿತು. ಸಂಜೆಯ ನಂತರವೂ ತುಂತು ಮಳೆ ಬೀಳುತ್ತಲೇ ಇತ್ತು. ಸಕಲೇಶಪುರ, ಹೆತ್ತೂರು ಭಾಗದಲ್ಲಿ ಜೋರು ಮಳೆ ಸುರಿದರೆ, ಆಲೂರು, ಚನ್ನರಾಯಪಟ್ಟಣ, ಹಿರೀಸಾವೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಕಸಬಾದಲ್ಲಿ ಭಾರಿ ಮಳೆ 

ಶನಿವಾರದ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಹಾಸನ ತಾಲ್ಲೂಕಿನ ಸಾಲಗಾಮೆ 6.2 ಮಿ.ಮೀ., ಹಾಸನ 6.8 ಮಿ.ಮೀ., ಕಟ್ಟಾಯ 19.3 ಮಿ.ಮೀ., ದುದ್ದ 8.2 ಮಿ.ಮೀ., ಶಾಂತಿಗ್ರಾಮ 40 ಮಿ.ಮೀ., ಗೊರೂರು 22.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 6.2 ಮಿ.ಮೀ., ಸಕಲೇಶಪುರ 4.8 ಮಿ.ಮೀ., ಬೆಳಗೋಡು 5.4 ಮಿ.ಮೀ., ಹಾನಬಾಳು 7 ಮಿ.ಮೀ., ಶುಕ್ರವಾರ ಸಂತೆ 2.4 ಮಿ.ಮೀ., ಮಾರನಹಳ್ಳಿ 1.4 ಮಿ.ಮೀ., ಹೊಸೂರು 6 ಮಿ.ಮೀ., ಹೆತ್ತೂರು 2.3 ಮಿ.ಮೀ., ಯಸಳೂರು 4 ಮಿ.ಮೀ. ಮಳೆ ಸುರಿದಿದೆ.

ಆಲೂರು ತಾಲ್ಲೂಕಿನ ಪಾಳ್ಯ 8.2 ಮಿ.ಮೀ., ಆಲೂರು 14.4 ಮಿ.ಮೀ., ಕುಂದೂರು 5.8 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಬಾಣವರ 42 ಮಿ.ಮೀ., ಜಾವಗಲ್ 17 ಮಿ.ಮೀ., ಕಣಕಟ್ಟೆ 16.8 ಮಿ.ಮೀ., ಕಸಬಾ 90 ಮಿ.ಮೀ., ಗಂಡಸಿ 21.6 ಮಿ.ಮೀ., ಯಳವಾರೆ 13.4 ಮಿ.ಮೀ. ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 7 ಮಿ.ಮೀ., ಕೊಣನೂರು 27.5 ಮಿ.ಮೀ., ಬಸವಾಪಟ್ಟಣ 12.2 ಮಿ.ಮೀ., ರಾಮನಾಥಪುರ 10.2 ಮಿ.ಮೀ., ದೊಡ್ಡಮಗ್ಗೆ 43.4 ಮಿ.ಮೀ. ದೊಡ್ಡ ಬೆಮ್ಮತ್ತಿ 8.2 ಮಿ.ಮೀ., ಕಸಬಾ 6 ಮಿ.ಮೀ. ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು 22.4 ಮಿ.ಮೀ., ಬೇಲೂರು 6.5 ಮಿ.ಮೀ., ಹಗರೆ 57 ಮಿ.ಮೀ., ಬಿಕ್ಕೋಡು 15 ಮಿ.ಮೀ., ಗೆಂಡೆಹಳ್ಳಿ 5 ಮಿ.ಮೀ, ಅರೆಹಳ್ಳಿ 5 ಮಿ.ಮೀ., ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 19 ಮಿ.ಮೀ., ಉದಯಪುರ 50 ಮಿ.ಮೀ., ಬಾಗೂರು 23 ಮಿ.ಮೀ., ನುಗ್ಗೇಹಳ್ಳಿ 16.6 ಮಿ.ಮೀ., ಹಿರೀಸಾವೆ 21.2 ಮಿ.ಮೀ., ಶ್ರವಣಬೆಳಗೊಳ 17.8 ಮಿ.ಮೀ. ಮಳೆ ಸುರಿದಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 26 ಮಿ.ಮೀ. ಹೊಳೆನರಸೀಪುರ 8.4 ಮಿ.ಮೀ., ಹಳ್ಳಿ ಮೈಸೂರು 12.6 ಮಿ.ಮೀ. ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು