ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿಗೆ ಉತ್ತಮ ಬೆಲೆ: ಕೇಂದ್ರಕ್ಕೆ ಮನವಿ- ಶಾಸಕ ಬಾಲಕೃಷ್ಣ

ಕೇಂದ್ರ ಸಚಿವರ ಭೇಟಿ: ಶಾಸಕ ಸಿ.ಎನ್. ಬಾಲಕೃಷ್ಣ
Published 17 ಡಿಸೆಂಬರ್ 2023, 14:16 IST
Last Updated 17 ಡಿಸೆಂಬರ್ 2023, 14:16 IST
ಅಕ್ಷರ ಗಾತ್ರ

ಹಿರೀಸಾವೆ: ತೆಂಗು ಹಾಗೂ ಕೊಬ್ಬರಿ ಬೆಲೆ ಕುಸಿದಿದ್ದು, ರೈತರು ಸಂಕಷ್ಟದಲ್ಲಿ ಇದ್ದಾರೆ. ಉತ್ತಮ ದರದೊಂದಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶನಿವಾರ ಹೋಬಳಿಯ ಮತಿಘಟ್ಟದಲ್ಲಿ ಹೇಳಿದರು.

ಗ್ರಾಮದಲ್ಲಿ ₹45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು  ಉದ್ಘಾಟಿಸಿ ಮಾತನಾಡಿದರು. ತೆಂಗು ಉತ್ಪನ್ನಗಳ ಬೆಲೆ ಕುಸಿತದ ಬಗ್ಗೆ, ತೆಂಗು ಬೆಳೆ ಪ್ರದೇಶದ ಶಾಸಕರುಗಳು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು. ಈ ವರ್ಷ ವಾಡಿಕೆಯಂತೆ ಮಳೆ ಇಲ್ಲದೆ ಅನಾವೃಷ್ಟಿ ಎದುರಾಗಿ ಎಲ್ಲ ಬೆಳೆಗಳು ಒಣಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಎಲ್ಲ ಬೆಳೆಗಳಿಗೂ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಹಿರಿಯರಾದ ಸಿಗೇಕೊಪ್ಪಲು ಬಿ.ಎಂ.ರಂಗಪ್ಪ, ಆಯರಹಳ್ಳಿ ಗೋವಿಂದರಾಮೇಗೌಡ, ಪರಮದ ದೇವರಾಜೇಗೌಡ, ಸಂಘದ ಅಧ್ಯಕ್ಷ ಆಯರಹಳ್ಳಿ ಪ್ರಭಾಕರ್, ಉಪಾಧ್ಯಕ್ಷ ಎಂ.ಜೆ.ದಿವಾಕರ್, ನಿರ್ದೇಶಕರಾದ ಹನುಮಂತೇಗೌಡ, ಗಿರೀಶ್, ಸೋರೆಕಾಯಿಪುರ ಸುರೇಶ್, ಶಿವಣ್ಣ, ಶಕುಂತಲ ನಂಜುಂಡಸ್ವಾಮಿ, ಸುಮತಿ ರಂಗೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಮಧು, ಪ್ರಮುಖರಾದ ಹಿರೀಸಾವೆ ಪಿಎಸಿಸಿಬಿ ಅಧ್ಯಕ್ಷ ಶ್ರೀನಾಥಬಾಬು, ರವಿಕುಮಾರ್, ಮಹೇಶ್, ಧನಂಜಯ, ಜುಟ್ಟನಹಳ್ಳಿ ಶ್ರೀನಿವಾಸ್ ನಿವೇಶನ ದಾನಿಗಳು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT