ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ‘ನನ್ನೊಳಗಿನ ನಾನು’ ಲೋಕಾರ್ಪಣೆ 28ಕ್ಕೆ

Published 25 ಜನವರಿ 2024, 14:07 IST
Last Updated 25 ಜನವರಿ 2024, 14:07 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಎಚ್.ಎಸ್. ಶ್ರೀಕಂಠಯ್ಯ ರಚಿಸಿರುವ ‘ನನ್ನೊಳಗಿನ ನಾನು’ ಕೃತಿಯನ್ನು ಜನವರಿ 28 ರಂದು ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ನಿವೃತ್ತ ಸಹಪ್ರಾಧ್ಯಾಪಕ ಎಚ್. ಸಿದ್ದೇಗೌಡ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದು ಮಿನಿ ಕಾದಂಬರಿ ರೀತಿಯಲ್ಲಿದೆ. ಕೃತಿಕಾರ ಎಚ್.ಎಸ್. ಶ್ರೀಕಂಠಯ್ಯ ಮಾತನಾಡಿ, ಎಚ್.ಡಿ. ದೇವೇಗೌಡ,  ಸಿ.ಎಸ್. ಪುಟ್ಟೇಗೌಡ, ಗಂಗಣ್ಣ  ಜತೆಗಿನ ರಾಜಕೀಯ ಒಡನಾಟ. ರಾಜಕೀಯ,ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿರುವುದನ್ನು ಈ ಕೃತಿಯಲ್ಲಿ ದಾಖಲು ಮಾಡಿದ್ದೇನೆ. ಒಂದು ಸಾವಿರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು. ಪ್ರಮುಖರಾದ ಆರ್.ಕೆ. ನಲ್ಲೂರು ಪ್ರಸಾದ್, ಸಿ.ಎಸ್. ಪುಟ್ಟೇಗೌಡ, ಎ.ಈ. ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಸಲಹಾ ಸಮಿತಿ ಸದಸ್ಯ ಮುದ್ದೇಗೌಡ ಕಾರ್ಯಕ್ರಮದಲ್ಲಿ  ಭಾಗವಹಿಸುವರು ಎಂದು ಹೇಳಿದರು. ಮುಖಂಡ ಎ.ಸಿ. ಆನಂದ್ ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT