ಭಾನುವಾರ, ಏಪ್ರಿಲ್ 11, 2021
33 °C

ಜಮೀನು ಸರ್ವೆ ನಡೆಸಿ, ರೈತರಿಗೆ ಅನ್ಯಾಯ ತಪ್ಪಿಸಿ: ಹಸಿರು ಸೇನೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ತಾಲ್ಲೂಕಿನ ದುದ್ದ ಹೋಬಳಿ ತಿಮ್ಲಾಪುರ ಗ್ರಾಮದಲ್ಲಿ ಕಾನೂನು ಪ್ರಕಾರ ಜಮೀನು ಸರ್ವೇ ನಡೆಸಿ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದುದ್ದ ಹೋಬಳಿ ಘಟಕದ ರೈತರು ಶುಕ್ರವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ ಸಲ್ಲಿಸಿದರು.

ತಿಮ್ಲಾಪುರ ಗ್ರಾಮದ ರೈತರು ಒಂದು ಎಕರೆಯಿಂದ ಮೂರು ಎಕರೆ ಜಮೀನು ಉಳ್ಳವರಾಗಿದ್ದಾರೆ. ಚಿತ್ರನಟ ಯಶ್ ಅವರ ಕುಟುಂಬದವರು ಡಾ.ಅಶೋಕ್ ಗೌಡ ಅವರಿಂದ ಸುಮಾರು 80 ರಿಂದ 100 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ. ಜಮೀನಿನ ಸುತ್ತ ಕಾಂಪೌಂಡ್‌ ನಿರ್ಮಿಸಿ ರೈತರಿಗೆ ಓಡಾಡಲು ದಾರಿ ಬಂದ್‌ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ ಕುಟುಂಬದವರು ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ

ಸಂಬಂಧಪಟ್ಟ ಅಧಿಕಾರಿಗಳಿಂದ ಜಮೀನು ಸರ್ವೇ ನಡೆಸಿ, ರೈತರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಅನ್ಯಾಯ ಸರಿಪಡಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರೈತ ಮುಖಂಡರಾದ ರಾಜೇಗೌಡ, ಅಣ್ಣಾಜಪ್ಪ, ಈರಯ್ಯ, ತಿಮ್ಮೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.