ಕೊಣನೂರು: ಕಾಲೇಜಿನ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ನೂತನ ಸಿಡಿಸಿ ಉಪಾಧ್ಯಕ್ಷ ಎಸ್.ಸಿ. ಚೌಡೇಗೌಡ ಮನವಿ ಮಾಡಿದರು.
ಇಲ್ಲಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಥಮ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಹಿಂದೆ ಇಲ್ಲಿನ ಕಾಲೇಜಿಗೆ ಹೆಣ್ಣುಮಕ್ಕಳು ಬರಲು ಬಹಳ ಆತಂಕಪಡುತ್ತಿದ್ದ ಸನ್ನಿವೇಶವನ್ನು ಹೋಗಲಾಡಿಸಲೇಬೇಕೆಂಬ ಹಠದಿಂದ ಹಿಂದಿನ ಅವಧಿಯ ಸಿಡಿಸಿ ಸದಸ್ಯರುಗಳು ಕೈಜೋಡಿಸಿದ ಪರಿಣಾಮ ಇಂದು ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿದೆ ಎಂದರು.
ಕ್ಯಾಂಟೀನ್ ವ್ಯವಸ್ಥೆ, ಬೈಕ್ ಸ್ಟ್ಯಾಂಡ್, ಆಡಿಟೋರಿಯಂ, ಗ್ರಂಥಾಲಯ, ಮಲ್ಟಿಜಿಮ್ ವ್ಯವಸ್ಥೆ ಒದಗಿಸಿದ್ದು, ಕಾಲೇಜು ಆವರಣವನ್ನು ಸಂಪೂರ್ಣ ಹಸಿರುಗೊಳಿಸಲಾಗಿದೆ. ಈ ಕಾಲೇಜಿಗೆ ಹೆಚ್ಚಿನ ಬಡಮಕ್ಕಳು ಬರುತ್ತಿದ್ದು, ಅವರಿಗೆ ಆಟೋಟಗಳಲ್ಲಿ ಭಾಗವಹಿಸಬೇಕೆಂಬ ಆಸೆ ಇದ್ದು ಅಂತಹವರಿಗೆ ಸದ್ಯ ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದದವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವುಗಳೂ ಸಹ ಅಂತಹ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುವ ಮೂಲಕ ಬಡಮಕ್ಕಳು ಮುಂದೆ ಬರುವಂತೆ ಮಾಡಬೇಕು ಎಂದರು.
ಸಿಡಿಸಿ ಸದಸ್ಯ ಕೆ.ಎಸ್. ವಾಸುದೇವ್, ಪುಟ್ಟಸ್ವಾಮಿಗೌಡ, ಸಂತೋಷ್‌ಗೌಡ, ನಂಜುಂಡೇಗೌಡ, ಕೃಷ್ಣೇಗೌಡ, ಮಂಜೇಗೌಡ, ಯೋಗೇಶ್, ಕೆ.ಆರ್. ಸುರೇಶ್, ಕೆ.ಎ.ಶ್ರೀಧರ್, ಎಸ್. ನಾಗರಾಜು, ಕೆ.ವಿ. ಸತೀಶ್, ಸೌಮ್ಯಲೋಕೇಶ್, ಪ್ರಾಂಶುಪಾಲ ಬಸವರಾಜ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎನ್. ಲಕ್ಷ್ಮೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.