ಹಾಸನ: ಪ್ರತಿ ತಿಂಗಳು ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

‘ಡಿಸಿಗಳೇ ಹಳ್ಳಿ ಕಡೆ ನಡೆ’ ಎಂಬ ಕಾರ್ಯಕ್ರಮವನ್ನು ವಾರದಲ್ಲಿ ಉಡುಪಿಯಿಂದ ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿ ಜತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪೌತಿ ಖಾತೆ, ಪಹಣಿ, ಪಿಂಚಣಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಸೇರಿದಂತೆ ಹತ್ತು ಅಂಶಗಳ ಪಟ್ಟಿ ಮಾಡಲಾಗಿದೆ. ಉಪವಿಭಾಗಾಧಿಕಾರಿ ಸಹ ತಿಂಗಳಿಗೆ ಎರಡು ಬಾರಿ ಹಾಗೂ ತಹಶೀಲ್ದಾರ್ ಮೂರು ದಿನ ಹಳ್ಳಿಗೆ ಹೋಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಕಂದಾಯ ಇಲಾಖೆ ಜನಸ್ನೇಹಿ ಮಾಡಲು ಹಲವು ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಕೆಲಸ ನಿರ್ವಹಿಸದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೂರನೇ ಶನಿವಾರ ನಡೆಸುವ ಕುರಿತು ಚರ್ಚೆ ನಡೆದಿದೆ. ಅಧಿಕಾರಿಗಳು ಸಂಜೆವರೆಗೂ ಹಳ್ಳಿಯಲ್ಲಿಯೇ ಇದ್ದು, ಅಲ್ಲಿನ ದಲಿತ ಕೇರಿ, ಅಂಗನವಾಡಿ ಅಥವಾ ಶಾಲೆಯಲ್ಲಿ ಬಿಸಿಯೂಟ ಮಾಡಬೇಕು. ಅಧಿಕಾರಿಗಳು ಮುಂದೆ ಯಾವ ಹಳ್ಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ಒಂದು ತಿಂಗಳು ಮುಂಚೆಯೇ ಘೋಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲ. ಮನೆ ಬಾಗಿಲಿಗೆ ಪಿಂಚಣಿ ಬರಲಿದೆ. ಮೃತರಿಗೂ ಪಿಂಚಣಿ ನೀಡುತ್ತಿರುವ ಬಗ್ಗೆ ಸರ್ವೆ ನಡೆಯುತ್ತಿದೆ. ಈಗ ಆಧಾರ್ ಜೋಡಣೆ ಮಾಡುವುದರಿಂದ ₹ 500 ಕೋಟಿ ಉಳಿತಾಯವಾಗಲಿದೆ ಎಂದರು.

ಮೂರು ವರ್ಷದಲ್ಲಿ ಜೆಡಿಎಸ್ ಇರಲ್ಲ

‘ಸಣ್ಣಪುಟ್ಟ ಸಮಾಜ ದೂರವಿಟ್ಟು ಸಚಿವ ಸಂಪುಟ ವಿಸ್ತರಣೆ’ ಮಾಡಲಾಗಿದೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅಶೋಕ್, ‘ಮೂರು ವರ್ಷದಲ್ಲಿ ಜೆಡಿಎಸ್ ಇರಲ್ಲ. ಜೆಡಿಎಸ್ ಸವಕಲು ನಾಣ್ಯ ಇದ್ದಂತೆ. ಬ್ಯಾಟರಿ ಹಾಕಿಕೊಂಡು ಹುಡುಕಬೇಕು. ಆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಬಂದಿರುವುದರಿಂದ ಅವರು ಸಹ ಒಂದು ರೀತಿ ಅನರ್ಹರೇ. ಅವರು ಪಕ್ಷಾಂತರಿ. ಮೂರು ಪಕ್ಷದಲ್ಲಿ (ಪಕ್ಷೇತರ, ಜೆಡಿಎಸ್, ಕಾಂಗ್ರೆಸ್) ಇದ್ದು ಬಂದವರು. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದಾಗ ಅವರ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.