ಬುಧವಾರ, ಜುಲೈ 28, 2021
22 °C
ಶಿವಲಿಂಗೇಗೌಡರ ವಿರುದ್ಧ ತಿರುಗಿಬಿದ್ದ ನಗರಸಭೆ ಸದಸ್ಯರು

ಬಿಜೆಪಿ ಬೆಂಬಲಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅರಸೀಕರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ತಿರುಗಿ ಬಿದ್ದಿರುವ ಜೆಡಿಎಸ್ ನ ಏಳು ಮಂದಿ ನಗರಸಭೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

ಅರಸೀಕೆರೆ ನಗರಸಭೆಯಲ್ಲಿ ತಮಗೆ ಪ್ರತ್ಯೇಕ ಆಸನ ಮೀಸಲಿಡುವಂತೆ ಕೋರಿ ಏಳು ಮಂದಿ ಜೆಡಿಎಸ್‌ ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

‘ಶಾಸಕ ಶಿವಲಿಂಗೇಗೌಡ ಹಾಗೂ ಸ್ಥಳೀಯ ನಾಯಕರಿಂದ ಉಸಿರುಗಟ್ಟಿಸುವ ವಾತಾವರಣ ಇದೆ. ಆದ್ದರಿಂದ ಬೇಸತ್ತು ಅವರ ಗುಂಪಿನಿಂದ ಹೊರ ಬಂದಿದ್ದೇವೆ. ಜೆಡಿಎಸ್‌ ಪಕ್ಷ ತೊರೆದಿಲ್ಲ. ಆದರೆ, ಮೂರನೇ ಒಂದು ಭಾಗ ಗುಂಪಾಗಿ ಪ್ರತ್ಯೇಕವಾಗಿದ್ದೇವೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಧ್ಯಕ್ಷರಿಗೆ ಬೆಂಬಲ ನೀಡುತ್ತೇವೆ’ ಎಂದು ಸದಸ್ಯರು ಘೋಷಿಸಿದರು.

31 ಸದಸ್ಯ ಬಲದ ಅರಸೀಕೆರೆ ನಗರಸಭೆಯಲ್ಲಿ 21 ಜೆಡಿಎಸ್, 6 ಬಿಜೆಪಿ, 3 ಪಕ್ಷೇತರರು ಹಾಗೂ 1 ಕಾಂಗ್ರೆಸ್ ಸದಸ್ಯ ಇದ್ದಾರೆ. ಆದರೆ, ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ. ಕೋರಂ ಕೊರತೆ ನೀಗಿಸಲು ಬಿಜೆಪಿ ನಾಯಕರು ಆಪರೇಷನ್ ಕಮಲ ನಡೆಸಿದ ಪರಿಣಾಮ 7 ಜನ ಸದಸ್ಯರು ಜೆಡಿಎಸ್ ನಿಂದ ಪ್ರತ್ಯೇಕವಾಗಿ ಬಂದು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು