ಗುರುವಾರ , ಫೆಬ್ರವರಿ 27, 2020
19 °C

ಎತ್ತಿನಗಾಡಿ ಓಟದ ಸ್ಪರ್ಧೆ: ಮಧು ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಣನೂರು: ಹೋಬಳಿಯ ಕಬ್ಬಳಿಗೆರೆಯಲ್ಲಿ ಶನಿವಾರ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯಿತು.

ಮಧ್ಯಾಹ್ನ ಪ್ರಾರಂಭವಾದ ಸ್ಪರ್ಧೆಯಲ್ಲಿ ಹಳ್ಳಿಕಾರ್ ಎತ್ತುಗಳು ಒಂದಕ್ಕಿಂತ ಒಂದು ವೇಗವಾಗಿ ಓಡಿದವು. ಜನರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುತ್ತಾ, ಕೂಗುತ್ತಾ ಪ್ರೋತ್ಸಾಹಿಸುತ್ತಿದ್ದರು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಅರಕಲಗೂಡು ತಾಲ್ಲೂಕಿನ ಹಂಡ್ರಂಗಿ, ಇಬ್ಬಡಿ, ಮಲ್ಲಿನಾಥಪುರ, ಅಕ್ಕಲವಾಡಿ, ಮಾದನೂರು, ಹೆಬ್ಬಾಲೆ, ಬಿದರೂರು, ಬಿಳಗುಲಿ, ಕಬ್ಬಳಿಗೆರೆ ಎತ್ತುಗಳಷ್ಟೇ ಅಲ್ಲದೆ, ಕೆ.ಆರ್.ನಗರ ತಾಲ್ಲೂಕಿನ ಹನಸೋಗೆ, ಚಿಕ್ಕನಾಯಕನಹಳ್ಳಿ, ಸಾಲಿಗ್ರಾಮ, ಹೊಳೆನರಸೀಪುರ, ಹಳೆಕೋಟೆ, ಹುಣಸೂರು, ಪಿರಿಯಾಪಟ್ಟಣದ ಚಾಮರಾಯನಕೋಟೆ, ಚಾಮರಾಜ ನಗರದ ವಿವಿಧೆಡೆಗಳಿಂದ ಬಂದಿದ್ದ 27ಕ್ಕೂ ಹೆಚ್ಚು ಜೊತೆ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.

ಅತ್ಯಂತ ಉತ್ಸಾಹದಿಂದ ನಡೆದ ರೋಚಕವಾದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಅಂತಿಮವಾಗಿ ಸಾಲಿಗ್ರಾಮದ ಮಧು ಅವರು ಪ್ರಥಮ ಸ್ಥಾನ (₹10 ಸಾವಿರ ನಗದು ಬಹುಮಾನ), ಕಬ್ಬಳಿಗೆರೆಯ ಭಗವಾನ್‌ ದ್ವಿತೀಯ ಸ್ಥಾನ (₹8 ಸಾವಿರ) ಮತ್ತು ಮಲ್ಲಿನಾಥಪುರದ ಕೃಷ್ಣೇಗೌಡ ತೃತೀಯ ಸ್ಥಾನ (₹6 ಸಾವಿರ) ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)