ಶನಿವಾರ, ಆಗಸ್ಟ್ 13, 2022
22 °C

ಮರದ ಕೊಂಬೆ ಬಿದ್ದು ನಿವೃತ್ತ ಸೈನಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮರದ ಕೊಂಬೆಯೊಂದು ತಲೆಮೇಲೆ ಬಿದ್ದು ನಿವೃತ್ತ ಸೈನಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಸೋಮವಾರ ಸಂಜೆ ಸಂಭವಿಸಿದೆ.

ಮಂಡ್ಯದ ಆರ್.ಎಲ್.ಪಟೇಲ್ (35) ಮೃತ ವ್ಯಕ್ತಿ. ಸ್ನೇಹಿತರೊಂದಿಗೆ ತಾಲ್ಲೂಕಿನ ಹೋಂ ಸ್ಟೇ ಒಂದಕ್ಕೆ ಭಾನುವಾರ ಬಂದಿದ್ದರು. ಸೋಮವಾರ ಮಂಡ್ಯಕ್ಕೆ ವಾಪಾಸಾಗುತ್ತಿದ್ದರು. ಕಾಫಿ ಪುಡಿ ಖರೀದಿಸಲು ವಾಹನದಿಂದ ಇಳಿದು ಅಂಗಡಿಗೆ ಹೋಗುತ್ತಿದ್ದಾಗ ಒಣಗಿದ್ದ ಕೊಂಬೆ ನೇರವಾಗಿ ತಲೆ ಮೇಲೆ ಬಿದ್ದಿದೆ. ಕೊಂಬೆ ಭಾರೀ ಗಾತ್ರದಲ್ಲಿ ಇದ್ದ ಕಾರಣ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ.

ನೌಷದ್ ಹಾಗೂ ಸ್ನೇಹಿತರು ಅವರ ಆಂಬುಲೆನ್ಸ್‌ನಲ್ಲಿ ಮೃತ ದೇಹವನ್ನು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 5 ತಿಂಗಳ ಹಿಂದೆ ನಿವೃತ್ತರಾಗಿದ್ದರು. ಅವರಿಗೆ ಪತ್ನಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.