ಹಾಸನ: ಫೈನಾನ್ಸ್ ಕಿರುಕುಳ ಹಾಗೂ ಸಾಲದ ಒತ್ತಡ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜೋಡಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ವೆಂಕಟೇಗೌಡ (48) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೆಂಕಟೇಗೌಡರು ಫೈನಾನ್ಸ್ಗಳಿಂದ ₹3.70 ಲಕ್ಷ, ಬ್ಯಾಂಕ್, ವ್ಯವಸಾಯ ಸಹಕಾರ ಸಂಘ, ಧರ್ಮಸ್ಥಳ ಸಂಘ ಮತ್ತು ಕೈಸಾಲ ಸೇರಿದಂತೆ ₹3.90 ಲಕ್ಷ, ಒಟ್ಟು ₹7.60 ಲಕ್ಷ ಸಾಲ ಮಾಡಿದ್ದರು.

ಸಾಲವನ್ನು ಮರು ಪಾವತಿಸುವಂತೆ ಫೈನಾನ್ಸ್ ಸಂಸ್ಥೆಗಳಿಂದ ಹಾಗೂ ಇತರರಿಂದ ನಿರಂತರ ಕಿರುಕುಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.