ಬೋನಿಗೆ ಬಿದ್ದ ಹೆಣ್ಣು ಚಿರತೆ

7

ಬೋನಿಗೆ ಬಿದ್ದ ಹೆಣ್ಣು ಚಿರತೆ

Published:
Updated:
Deccan Herald

ಶ್ರವಣಬೆಳಗೊಳ: ಬಾಹುಬಲಿ ಬೆಟ್ಟದ ವಿಂಧ್ಯಗಿರಿ, ಸಂತೆಮೈದಾನ ವ್ಯಾಪ್ತಿಯಲ್ಲಿ ಆಗಾಗ್ಗೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ 3 ವರ್ಷದ ಹೆಣ್ಣು ಚಿರತೆ ಸೋಮವಾರ ರಾತ್ರಿ ಬೋನಿಗೆ ಬಿದ್ದಿದೆ.

ಪಟ್ಟಣದ ಎ.ಕೆ.ಕಾಲೊನಿ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ರಾತ್ರಿ ಸಿಕ್ಕಿಬಿದ್ದಿದೆ. ಕಾಲೊನಿ ವ್ಯಾಪ್ತಿಯಲ್ಲಿ ಆಗಾಗ್ಗೆ ನಾಯಿ ಬಲಿ ಪಡೆಯುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು.

ಜನರ ದೂರಿನ ಮೇರೆಗೆ ಬೋನು ಇರಿಸಲಾಗಿದೆ. ಚಿರತೆ ಸಿಕ್ಕಿ ಬೀಳುವುದರೊಂದಿಗೆ ನಿರಾಳವಾಗಿದೆ ಎಂದು  ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಎಂ.ಜನಾರ್ದನ್ ತಿಳಿಸಿದರು.

ಅರಣ್ಯ ಇಲಾಖೆಯ ಎಸಿಎಫ್‌ ಸುದರ್ಶನ್‌, ಆರ್‌ಎಫ್‌ಒ ಹೇಮಂತ್‌, ಅರಣ್ಯ ರಕ್ಷಕ ಕರೀಗೌಡ, ವಲಯ ಅರಣ್ಯಾಧಿಕಾರಿ ವಿಶ್ವನಾಥ್‌ ಸ್ಥಳಕ್ಕೆ ಬಂದಿದ್ದು, ಸೆರೆಸಿಕ್ಕ ಚಿರತೆಯನ್ನು ಒಯ್ದುರು.

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !