ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳು ಸ್ವರ್ಣಗೌರಿ ಮಹೋತ್ಸವ ರದ್ದು

Last Updated 11 ಆಗಸ್ಟ್ 2020, 4:17 IST
ಅಕ್ಷರ ಗಾತ್ರ

ಅರಸೀಕೆರೆ: 159 ವರ್ಷ ಹಿನ್ನೆಲೆಯ, ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿಯ ಮಹೋತ್ಸವವನ್ನು ಈ ಬಾರಿ ರದ್ದುಗೊಳಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಡಾಳು ಸ್ವರ್ಣಗೌರಿ ಭಕ್ತಮಂಡಳಿ ಅಧ್ಯಕ್ಷ ಶಿವಲಿಂಗಪ್ಪ, ಆ.21ರಿಂದ 30ರ ವರೆಗೆ ನಡೆಯಬೇಕಿದ್ದ 159ನೇ ಸ್ವರ್ಣಗೌರಿ ದೇವಿಯ ಮಹೋತ್ಸವವನ್ನು ಕೋವಿಡ್‌ 19 ಸಂಬಂಧ ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ವರ್ಷ 10 ದಿನ ಜರುಗುವ ಸ್ವರ್ಣಗೌರಿ ದೇವಿಯ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಬಂದು ದೇವಿಯ ದರ್ಶನ ಪಡೆದು ಹರಕೆ ತೀರಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಭೀತಿ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಭಕ್ತರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಹೋತ್ಸವವನ್ನು ರದ್ದುಗೊಳಿಸಲು ಸ್ವರ್ಣಗೌರಿ ಭಕ್ತಮಂಡಳಿ ಹಾಗೂ ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಅವರು ವಿವರಿಸಿದರು.

ಆ.21ರಿಂದ 30ರವರೆಗೆ ಸ್ವರ್ಣಗೌರಿ ದೇವಿಯ ದೇವಾಲಯದಲ್ಲಿ ಯಾವುದೇ ವಿಶೇಷ ಪೂಜೆ, ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರುವುದಿಲ್ಲ. ಆಗಸ್ಟ್ 10ರಿಂದಲೇ ಗ್ರಾಮದ ದೇವಾಲಯಕ್ಕೆ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಮಾಡಾಳು ಗ್ರಾಮದಲ್ಲಿ, ಸ್ವರ್ಣಗೌರಿ ದೇವಾಲಯದ ಮುಂಭಾಗದಲ್ಲಿ ಹಾಗೂ ಸುತ್ತಮುತ್ತ ಓಡಾಡುವ ಭಕ್ತರು ಮಾಸ್ಕ್‌ ಧರಿಸುವುದು, ಅಂತರ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಮಾಡಾಳು ಸ್ವರ್ಣಗೌರಿ ಭಕ್ತಮಂಡಳಿಯ ಪದಾಧಿಕಾರಿಗಳಾದ ಎಂ.ಈ.ಚಂದ್ರಶೇಖರ್, ಎಂ.ಸಿ.ನಟರಾಜ್, ಕೊಡ್ಲಿ ಬಸವರಾಜ್, ಪ್ರಕಾಶ್ ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT