ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆಹಳ್ಳಿಯಲ್ಲಿ ದಲಿತರ ಗುಡಿಸಲಿಗೆ ಬೆಂಕಿ

Last Updated 2 ಜೂನ್ 2019, 9:42 IST
ಅಕ್ಷರ ಗಾತ್ರ

ಹಳೇಬೀಡು: ಬೇಲೂರು ತಾಲ್ಲೂಕಿನ ತಟ್ಟೆಹಳ್ಳಿಯ ಗೋಮಾಳದಲ್ಲಿ, ವಾರದ ಹಿಂದೆ ದಲಿತರು ನಿರ್ಮಿಸಿಕೊಂಡಿದ್ದ ಮೂರು ಗುಡಿಸಲುಗಳಿಗೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.

‘ನಾವು ವಾಸವಾಗಿರುವ ಮನೆಗಳು ಕಿಷ್ಕಿಂಧೆಯಾಗಿವೆ. ಮಕ್ಕಳು, ದನ– ಕರು ಕಟ್ಟಿಕೊಂಡು ಜೀವನ ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ಗೋಮಾಳದಲ್ಲಿ ಗುಡಿಸಲು ಹಾಕಿ ಕೊಂಡಿದ್ದೇವೆ. ಈಗ ಗುಡಿಸಲುಗಳು ಸುಟ್ಟು ಹೋಗಿದ್ದು, ದಿಕ್ಕು ತೋಚದಂತಾಗಿದೆ. ಸರ್ಕಾರದಿಂದಲೇ ನಮಗೆ ಗೋಮಾಳದಲ್ಲಿ ನಿವೇಶನ ನೀಡಬೇಕು. ಸೂಕ್ತ ರಕ್ಷಣೆ ನೀಡಬೇಕು’ ಎಂದು ಲಲಿತಮ್ಮ, ಹಾಲಮ್ಮ ಹಾಗೂ ರಂಗಸ್ವಾಮಿ ಅಳಲು ತೋಡಿಕೊಂಡರು.

ಗ್ರಾಮದ ಹೊರವಲಯದಲ್ಲಿ 63 ಎಕರೆ ಗೋಮಾಳ ಇದೆ. ಮೂರು ವರ್ಷಗಳ ಹಿಂದೆ, ಅಲ್ಲಿ ಅಕ್ರಮವಾಗಿ ವ್ಯವಸಾಯ ಮಾಡುತ್ತಿದ್ದ ಹಾಗೂ ಗುಡಿಸಲು ಹಾಕಿಕೊಂಡಿದ್ದ ಕೆಲವರನ್ನು ತಹಶೀಲ್ದಾರ್‌ ಜಗದೀಶ್‌ ತೆರವುಗೊಳಿಸಿದ್ದರು. ಜಾನುವಾರುಗಳನ್ನು ಮಾತ್ರ ಈ ಪ್ರದೇಶವನ್ನು ಬಳಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಆದರೆ, ಇತ್ತೀಚೆಗೆ ಕೆಲವರು ಮತ್ತೆ ಅಲ್ಲಿ ವ್ಯವಸಾಯಕ್ಕೆ ಮುಂದಾಗಿದ್ದರು. ಅದನ್ನು ಕಂಡು ಈ ದಲಿತ ಕುಟುಂಬಗಳೂ ಗುಡಿಸಲು ಹಾಕಿಕೊಂಡಿದ್ದವು ಎಂದು ತಿಳಿದುಬಂದಿದೆ.

‘ಗ್ರಾಮದ ರುದ್ರಣ್ಣ ಹಾಗೂ ಕಾರ್ತಿಕ್‌ ಅವರು ಬೆಂಕಿ ಇಟ್ಟಿದ್ದಾರೆ’ ಎಂದು ಗುಡಿಸಲು ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT