ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ಗೆ ಫ್ಲೇವರ್ಡ್‌ ಮಿಲ್ಕ್‌ ಮಾರುಕಟ್ಟೆಗೆ: ಎಚ್‌.ಡಿ. ರೇವಣ್ಣ

ಮೆಗಾ ಡೈರಿ ಶಂಕುಸ್ಥಾಪನೆಗೆ ಪ್ರಧಾನಿ ಮೋದಿಗೆ ಆಹ್ವಾನ
Last Updated 13 ಜನವರಿ 2022, 7:24 IST
ಅಕ್ಷರ ಗಾತ್ರ

ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ ₹ 175 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಯುಎಚ್‌ಟಿ ಪೆಟ್ ಬಾಟಲ್ ಘಟಕದಿಂದ ಉತ್ಪಾದಿಸುತ್ತಿರುವ ಹತ್ತು ಬಗೆಯ ಫ್ಲೇವರ್ಡ್‌ ಮಿಲ್ಕ್‌ ಗಳನ್ನು ಮಾರ್ಚ್‌ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ಸರ್ಕಾರದ ಅನುದಾನ ಅಥವಾ ಯಾವುದೇ ಸಾಲ ಪಡೆಯದೇ ಹಾಲಿನ ಡೈರಿಗೆಬಂದ ಆದಾಯ ಹಾಗೂ ಗ್ರಾಹಕರ ಸಹಕಾರದಿಂದ ಪೆಟ್‌ ಬಾಟಲ್‌ ಘಟಕ ನಿರ್ಮಿಸಲಾಗಿದೆ. ಗಂಟೆಗೆ 30 ಸಾವಿರ ಬಾಟೆಲ್‌ ಅಂದರೆ ನಿತ್ಯ 5 ಲಕ್ಷ ಬಾಟಲ್ ಉತ್ಪಾದಿಸಲಾಗುತ್ತದೆ. ಬನಾನ ಮಿಲ್ಕ್‌, ಬಾದಾಮ್‌, ಸ್ಟ್ರಾಬೆರಿ ಮತ್ತು ಪಿಸ್ತಾ ಫ್ಲೇವರ್‌ ಮಿಲ್ಕ್‌ ಉತ್ಪಾದನೆ ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಹೆಚ್ಚಾಗುತ್ತಿದ್ದು, ಕೋವಿಡ್ ತೀವ್ರತೆನೋಡಿಕೊಂಡು ಮಾರುಕಟ್ಟೆಗೆ ಉತ್ಪನ್ನಗಳನ್ನು ಬಿಡಲಾಗುವುದು. ಈಗಾಗಲೇ ಕೆಲವು ವರ್ತಕರಿಗೆಮಾದರಿಗಳನ್ನು ಕಳುಹಿಸಲಾಗಿದೆ ಎಂದರು.

ಫ್ಲೇವರ್ಡ್ ಮಿಲ್ಕ್‌ಗೆ ಬೇಡಿಕೆ ಹೆಚ್ಚಾದರೆ ಮತ್ತೊಂದು ಘಟಕ ಸ್ಥಾಪನೆಗೆ ಕಟ್ಟಡ ಸಿದ್ಧವಿದ್ದು, ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು. ಒಂದೇ ಮಳಿಗೆಯಲ್ಲಿನಂದಿನಿ ಎಲ್ಲಾ ಉತ್ಪನ್ನಗಳು ಸಿಗುವಂತಹ ಹೈಟೆಕ್‌ ಪಾರ್ಲರ್‌ ಅನ್ನು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಿರ್ಮಿಸುವ ಉದ್ದೇಶವಿದೆ ಎಂದರು.

ಒಕ್ಕೂಟಕ್ಕೆ ಬಂದ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಹಾಲು ಉತ್ಪಾದಕರಿಂದ ಖರೀದಿಸುವ ಲೀಟರ್ ಹಾಲಿಗೆ ₹1 ಹೆಚ್ಚಿಗೆ ನೀಡಲಾಗುವುದು ಎಂದರು.

ಹಾಸನ ನಗರ ಸಮೀಪದ ಕೌಶಿಕ ಬಳಿ ₹725 ಕೋಟಿ ವೆಚ್ಚದ ಮೆಗಾ ಡೈರಿ ನಿರ್ಮಾಣಕ್ಕೆ ಶಂಕ ಸ್ಥಾಪನೆ ಹಾಗೂ ಪೆಟ್‌ ಬಾಟಲ್‌ ಉದ್ಘಾಟನೆಗೆ ಪ್ರಧಾನಿನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದು, ಅವರು ಭಾಗವಹಿಸುವ ನೀರೀಕ್ಷೆ ಇದೆ ಎಂದುಹೇಳಿದರು.

ಹಾಮೂಲ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಜಿಲ್ಲೆಯಲ್ಲಿ ನಂದಿನಿಹೆಸರಿನಲ್ಲಿ ಯಾವುದೇ ನಕಲಿ ಉತ್ಪನ್ನಗಳ ಮಾರಾಟ ಕಂಡು ಬಂದಿಲ್ಲ. ಅನೇಕಮಳಿಗೆಗಳಿಗೆ ಭೇಟಿ ನೀಡಿ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT