ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಶಕ್ತಿ ಕೊಡಿ: ಮನವಿ

ಬಿಜೆಪಿ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಎಚ್‌.ಎಂ.ವಿಶ್ವನಾಥ್‌ ಕೋರಿಕೆ
Last Updated 29 ನವೆಂಬರ್ 2021, 15:55 IST
ಅಕ್ಷರ ಗಾತ್ರ

ಸಕಲೇಶಪುರ: ‘ರಾಜ್ಯದ ಅಭಿವೃದ್ಧಿಯ ಬಗ್ಗೆ ಸಕಾರಾತ್ಮಕವಾಗಿ ಚರ್ಚಿಸಿ, ಸರ್ಕಾರಕ್ಕೆ ಸಲಹೆ ನೀಡುವ ಅನುಭವಿ ಗಳು, ಯೋಗ್ಯರು ಇರಬೇಕಾದ ವಿಧಾನ ಪರಿಷತ್‌ಗೆಮದ್ಯ ಮಾರಾಟ ಮಾಡುವವರು, ಕುಟುಂಬ ರಾಜಕಾರಣ ಹಿನ್ನೆಲೆವುಳ್ಳವರು ಆಯ್ಕೆಯಾಗಿ ಬಂದರೆ ಪರಿಷತ್ತಿನ ಗೌರವ ಏನಾಗಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್ ಪ್ರಶ್ನೆ ಮಾಡಿದರು.

ವಿಧಾನ ಪರಿಷತ್ ಚುನಾವಣೆ ಸಂಬಂಧ ಸೋಮವಾರ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

‘ವಿಶ್ವನಾಥ್‌ ಅವರು ಹುಟ್ಟು ಹೋರಾಟಗಾರ, ರೈತ, ದಲಿತ ಚಳವಳಿ ಸೇರಿದಂತೆ ಹಲವು ಹೋರಾಟಗಳನ್ನು ಮಾಡಿದ್ದಾರೆ. ಜನಪರವಾದ ಕೆಲಸಗಳನ್ನು ಈಗಲೂ ಮಾಡುತ್ತಿದ್ದಾರೆ. ಶಾಸಕರಾಗಿ ಅನುಭವ ಇದೆ. ಮೂವರು ಅಭ್ಯರ್ಥಿಗಳಲ್ಲಿ ಎಚ್‌.ಎಂ. ವಿಶ್ವನಾಥ್‌ ಒಬ್ಬರೇ ಅರ್ಹತೆ ಇರುವ ಅಭ್ಯರ್ಥಿ’ ಎಂದರು.

ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮಾತ್ರ ಸ್ಪರ್ಧೆ ನಡೆಯಲಿದೆ. ವಿಶ್ವನಾಥ್‌ ಮಾಜಿ ಶಾಸಕರಾದರೂ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ಎಲ್ಲಾ ಕ್ಷೇತ್ರಗಳ ಬಗ್ಗೆ ಸಮಗ್ರ ಅನುಭವ ಹೊಂದಿರುವುದರಿಂದ ಮೇಲ್ಮನೆಗೆಅರ್ಹ ವ್ಯಕ್ತಿ’ ಎಂದರು.

ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ಕ್ಲಬ್‌, ಬಾರ್‌, ಹಣ, ಅಂತಸ್ತು, ರಾಜಕೀಯ ಕುಟುಂಬದ ಬಲ ಇಲ್ಲದ ನನ್ನನ್ನು ನನ್ನ ಕೆಲಸ ನೋಡಿ ಬಿಜೆಪಿ ಟಿಕೆಟ್‌ ನೀಡಿದೆ. ಯಾವುದೇ ಅಧಿಕಾರ ಇಲ್ಲದೆಯೂ, ಬಿಜೆಪಿ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಈ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಕೊಡಿ, ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

‌ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌, ಮುಖಂಡರಾದ ರೇಣುಕುಮಾರ್, ಬಿ.ಎಸ್‌. ಪ್ರತಾಪ್‌, ಜೈ ಮಾರುತಿ ದೇವರಾಜ್‌, ಚಂದ್ರಕಲಾ, ವಿಜಯ್‌ ವಿಕ್ರಂ, ಲೋಹಿತ್‌ ಜಂಬರಡಿ, ಭಾಸ್ಕರ್‌, ಮಂಡಲ ಅಧ್ಯಕ್ಷ ಮಂಜುನಾಥ ಸಂಘಿ, ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್‌, ಸಿಮೆಂಟ್‌ ಮಂಜು, ಡಿ. ರಾಜ್‌ಕುಮಾರ್ ಇದ್ದರು.

ಸಂದೇಶ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT