ಸರ್ಕಾರ ಐದು ವರ್ಷ ಗ್ಯಾರಂಟಿ, ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರೇವಣ್ಣ

7

ಸರ್ಕಾರ ಐದು ವರ್ಷ ಗ್ಯಾರಂಟಿ, ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರೇವಣ್ಣ

Published:
Updated:

ಹಾಸನ:  ’ನಮ್ಮ ಸರ್ಕಾರ ಐದು ವರ್ಷ ಗ್ಯಾರಂಟಿ, ನನ್ನ ಸಂಪರ್ಕದಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಜಿ.ಪರಮೇಶ್ವರ್ ನೋಡಿಕೊಳ್ಳುತ್ತಾರೆ' ಎಂದು ಹೇಳಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಪರೋಕ್ಷವಾಗಿ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಒಪ್ಪಿಕೊಂಡರು. 

ಜಾರಕಿಹೊಳಿ ಬ್ರದರ್ಸ್ ಸಿದ್ದಾರಾಮಯ್ಯ ಬರುವಿಕೆಗೆ ಕಾಯುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬೇರೆಯವರೇ? ಅವರು ನಮ್ಮವರೇ, ನಮ್ಮ ಸರ್ಕರದವರೇ. ಸರ್ಕಾರ ಬೀಳುತ್ತೆ ಎಂಬುದೆಲ್ಲ ಮಾಧ್ಯಮದವರ ಸೃಷ್ಟಿ. ನಾವು ಐದು ವರ್ಷ ಸರ್ಕಾರ ನಡೆಸುವುದಿಲ್ಲ ಅಂತಾ ಡೌಟಾ ನಿಮಗಿದೆಯೇ ಎಂದು  ಪ್ರಶ್ನಿಸಿದರು.

ನಮ್ಮದೇ ಸರ್ಕಾರ ನಾವೇ ನೆಡಸೋದು ಐದು ವರ್ಷ ಗ್ಯಾರಂಟಿ ಎಂದು ರೇವಣ್ಣ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !