ಹಳೇಬೀಡು: ವಿಶ್ವ ಪಾರಂಪರಿಕ ತಾಣವಾದ ಹಳೇಬೀಡು ಪ್ರವಾಸಿಗರು ಹಾಗೂ ವರ್ತಕರ ಉಪಟಳದಿಂದ ಕಸದ ತೊಟ್ಟಿಯಂತಾಗಿದೆ. ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆಗೆ ಸೇರಿರುವ ಜೈನ ಬಸದಿ ರಸ್ತೆಯ ಎರಡೂ ಬದಿಯಲ್ಲಿ ತ್ಯಾಜ್ಯ ಹರಡಿದೆ.

ಬಸ್ತಿಹಳ್ಳಿ ವೃತ್ತದಿಂದ ಸುಮಾರು 100 ಮೀಟರ್ ದೂರದವರೆಗೂ ಪ್ರವಾಸಿಗರು ಓಡಾಡುವ ಸ್ಥಳದಲ್ಲಿಯೇ ತ್ಯಾಜ್ಯ ಬೀಳುತ್ತಿದ್ದು, ಇದೇನು ವಿಶ್ವ ಪಾರಂಪರಿಕ ತಾಣವೇ ಎಂಬ ಪ್ರಶ್ನೆ ಪ್ರವಾಸಿಗರಲ್ಲಿ ಮೂಡುವಂತಾಗಿದೆ.

ಬಸ್ತಿಹಳ್ಳಿಯ ಜೈನ ಬಸದಿ ಪ್ರವೇಶ ದ್ವಾರದ ಬಳಿ ಅಡುಗೆ ಮಾಡಿದ ಪ್ರವಾಸಿಗರು, ಬೇಯಿಸಿ ಉಳಿದ ಆಹಾರ ಪದಾರ್ಥವನ್ನು ಸುರಿದಿದ್ದಾರೆ. ರಾಶಿಗಟ್ಟಲೆ ಸುರಿದ ಅನ್ನ ಕೊಳೆತು ದುರ್ವಾಸನೆ ಬೀರುತ್ತಿದೆ. ಕೆಲವು ಪ್ರವಾಸಿಗರು ನಡೆದುಕೊಳ್ಳುವ ರೀತಿಯಿಂದ ಬೇರೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಜೈನ ಬಸದಿ ಪ್ರವೇಶ ದ್ವಾರದ ಬಳಿ ನಿತ್ಯ ಶಾಲಾ ಮಕ್ಕಳ ಪ್ರವಾಸದವರು ಅಡುಗೆ ಮಾಡುತ್ತಿದ್ದಾರೆ. ಕೆಲವರು ಸ್ವಚ್ಛ ಮಾಡಿ ತೆರಳುತ್ತಾರೆ. ಸಾಕಷ್ಟು ಮಂದಿ ಉಳಿದ ಆಹಾರ ಪದಾರ್ಥ ಹಾಗೂ ಊಟ, ಉಪಾಹಾರ ಸೇವಿಸಿದ ಪೇಪರ್ ಪ್ಲೇಟ್ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದ ಬಸ್ತಿಹಳ್ಳಿ ಗ್ರಾಮದ ಸ್ವಚ್ಛತೆಗೆ ಧಕ್ಕೆಯಾಗಿದೆ. ಜೈನ ಬಸದಿ ಬಳಿ ಶೌಚಾಲಯ ಇಲ್ಲದೇ ಇರುವುದರಿಂದ ಕೆಲವು ಪ್ರವಾಸಿಗರು ಮಲ–ಮೂತ್ರ ವಿಸರ್ಜನೆ ಮಾಡುತ್ತಾರೆ ಎಂಬ ದೂರು ಬಸ್ತಿಹಳ್ಳಿ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಹೊಯ್ಸಳೇಶ್ವರ ದೇವಾಲಯ ಪ್ರವೇಶ ದ್ವಾರದ ಬಳಿ ನಗರೇಶ್ವರ ಸ್ಮಾರಕ ಸಂಕೀರ್ಣ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗೆ ತೆರಳುವ ರಸ್ತೆ ಬದಿಯ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಮಳೆ ಬಂದಾಗ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತದೆ. ಕಬ್ಬಿನ ಹಾಲು ಹಿಂಡಿದ ಸೆತ್ತೆ, ಕಾಫಿ ಚಹಾ ಕುಡಿದ ಲೋಟಗಳು ಈ ಸ್ಥಳದಲ್ಲಿ ರಾಶಿಯಾಗಿ ಬೀಳುತ್ತಿವೆ.

ಕಸ ಸಾಗಿಸುವ ವಾಹನ ಸಂಚರಿಸಿದರೂ ಇಲ್ಲಿ ಕಸ ಹಾಕುವ ಪ್ರವೃತ್ತಿ ನಡೆಯುತ್ತಿದೆ. ಕಳೆದ ವಾರ ಗ್ರಾಮ ಪಂಚಾಯಿತಿಯವರು ಹೊಯ್ಸಳೇಶ್ವರ ದೇವಾಲಯ ಬಳಿ ರಸ್ತೆಗೆ ಚಾಚಿದ ಅಂಗಡಿಗಳನ್ನು ಹಿಂದಕ್ಕೆ ಸರಿಸಿ, ಸ್ವಚ್ಛವಾಗಿಟ್ಟುಕೊಳ್ಳಲು ತಿಳಿವಳಿಕೆ ನೀಡಿದ್ದರು. ಆದರೂ ವರ್ತಕರು ಕಸ ಸುರಿಯುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಹೊಯ್ಸಳೇಶ್ವರ ಹಾಗೂ ಜೈನ ದೇವಾಲಯದ ಮುಂಭಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಸ ಸುರಿಯುವುದು ಕಂಡುಬಂದರೆ ಗ್ರಾಮ ಪಂಚಾಯಿತಿಗೆ ತಿಳಿಸಬೇಕು ಎನ್ನುತ್ತಾರೆ ಮುಖಂಡ ರವಿ.

ಪ್ರವಾಸಿ ತಾಣದ ಸ್ವಚ್ಛತೆಗೆ ಪ್ರವಾಸೋದ್ಯಮ ಹಾಗೂ ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆಯವರು ಕೈಜೋಡಿಸಬೇಕು. ದೇವಾಲಯದ ಸುತ್ತ ಜನರು ಕಸ ಸುರಿಯದಂತೆ ನೋಡಿಕೊಳ್ಳಬೇಕು

-ಎಚ್.ಬಿ.ಚಂದ್ರಶೇಖರ್ ಗ್ರಾಮ ಪಂಚಾಯಿತಿ ಸದಸ್ಯ

ಶಾಲಾ ಮಕ್ಕಳು ಹಾಗೂ ಪ್ರವಾಸಿಗರ ದೊಡ್ಡ ತಂಡ ಹಳೇಬೀಡಿನಲ್ಲಿ ಉಳಿಯಲು ಡಾರ್ಮೆಟರಿ ಹಾಗೂ ಅಡುಗೆ ಮಾಡಿಕೊಳ್ಳುವಂತಹ ಜಾಗದ ವ್ಯವಸ್ಥೆ ಆಗಬೇಕಾಗಿದೆ. ಇದರಿಂದ ಕಸ ಹಾಕುವುದು ತಪ್ಪಲಿದೆ

-ಮಹೇಶ್ ಸ್ಥಳೀಯ ನಿವಾಸಿ

ಡಿ.ಸಿ ಅಸಮಾಧಾನ

ಜೈನ ಬಸದಿಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ರಸ್ತೆಯ ಸುತ್ತ ಬಿದ್ದಿದ್ದ ಕಸದ ರಾಶಿ ನೋಡಿ ಬೇಸರ ವ್ಯಕ್ತಪಡಿಸಿದರು. ಪ್ರವಾಸಿಗರು ಕಸ ಸುರಿಯದಂತೆ ಪುರಾತತ್ವ ಸಿಬ್ಬಂದಿ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರಲ್ಲಿಯೂ ಇರಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿ ಗ್ರಾಮ ಪಂಚಾಯಿತಿಯನ್ನು ಹೊಣೆ ಮಾಡಬಾರಾದು. ಜೆಸಿಬಿಯಿಂದ ದೊಡ್ಡದಾದ ತ್ಯಾಜ್ಯ ರಾಶಿ ತೆರವು ಮಾಡಲು 8ರಿಂದ 10 ಗಂಟೆ ಬೇಕು. ಇದಕ್ಕಾಗಿ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ತ್ಯಾಜ್ಯ ಸಾಗಿಸಲು ಪಂಚಾಯಿತಿಯ ಟ್ರ್ಯಾಕ್ಟರ್ ಸಂಚರಿಸುತ್ತದೆ. ಆದರೂ ಕೆಲವು ಕಡೆ ತ್ಯಾಜ್ಯ ರಾಶಿ ಬೀಳುತ್ತಿದೆ. ಕಸ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಎಸ್.ಸಿ.ವಿರೂಪಾಕ್ಷ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.