ಶ್ರವಣಬೆಳಗೊಳ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಮ್ಮನಿಂಗಲ ಗ್ರಾಮದ ಉದ್ಯಮಿ ಸ್ವಾಮಿ ಗೌಡ ಉದಾರತೆಯಿಂದ ₹ 6 ಲಕ್ಷ ವೆಚ್ಚದ ನೂತನ ಟಾಟಾ ವಿಂಗರ್ ವಾಹನವನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ದಮ್ಮನಿಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬಾಂಬೆ ಲಕ್ಕಪ್ಪ ನಂಜಮ್ಮ ಚಾರಿಟಬಲ್ ಟ್ರಸ್ಟ್ನಿಂದ ನೀಡಿದ ನೂತನ ಶಾಲಾ ವಾಹನವನ್ನು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ದಾನಿಗಳಾದ ಸ್ವಾಮಿಗೌಡರು ತಮ್ಮ ಹುಟ್ಟೂರಿನ ಬಾಂಧವ್ಯ ಮರೆಯದೇ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ವಾಹನದ ಸೇವೆ ಒದಗಿಸಿದ್ದಾರೆ. ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ತಾಲ್ಲೂಕಿನ 24 ಶಾಲೆಗಳಲ್ಲಿ ಅಧಿಕೃತವಾಗಿ ಮಕ್ಕಳ ಮನೆ ಪ್ರಾರಂಭಿಸಲಾಗಿದೆ. 65 ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಾಗಿದ್ದು, ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದೆ ಎಂದರು.

ತಾಲ್ಲೂಕಿನಲ್ಲಿ ಅನೇಕ ಶಿಥಿಲ ಕಟ್ಟಡಗಳಿದ್ದು, ಹೆಚ್ಚುವರಿ ಕೊಠಡಿಗಳಿಗೆ ಪ್ರಸ್ತಾಪ ಮಾಡಿದರೂ ಸಹ ಕ್ರಮವಾಗಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಅನುದಾನದ ಕೊರತೆಯಿಂದಾಗಿ ಒಂದೂ ಕೊಠಡಿಗಳನ್ನು ಮಂಜೂರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮತ್ತು ಬಿಆರ್ಸಿ ಅನಿಲ್ ಕೆ.ಎನ್. ಮಾತನಾಡಿದರು.

ವಾಹನ ಒದಗಿಸಿದ ದಾನಿ ಸ್ವಾಮಿಗೌಡ ಅವರನ್ನು ಶಾಲೆ ವತಿಯಿಂದ ಗೌರವಿಸಲಾಯಿತು. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಎಂ.ಡಿ.ಲೀಲಾ, ವಾಹನದ ವಾಹನ ಚಾಲಕರಿಗೆ ಪ್ರತಿ ತಿಂಗಳು ವೈಯಕ್ತಿಕವಾಗಿ ₹5ಸಾವಿರ ನೀಡುವುದಾಗಿ ಹೇಳಿದರು. ಇನ್ನುಳಿದ ವಾಹನದ ನಿರ್ವಹಣೆಯನ್ನು ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದಿಂದ ನಿರ್ವಹಿಸುವುದಾಗಿ ಮುಖ್ಯ ಶಿಕ್ಷಕಿ ಸೌಮ್ಯಾ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಭವ್ಯಾ ಪ್ರಕಾಶ್, ರಾಮಣ್ಣ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ರುದ್ರೇಶ್ ಮತ್ತು ನಾರಾಯಣಾಚಾರ್, ಇಸಿಒ ಯಾದವರಾಜು, ಸಿಆರ್ಪಿ ಯೋಗೇಶ್ ಕುಮಾರ್, ಪಿಡಿಒ ಅರುಣ್ ಅಂಗಡಿ, ಮುಖಂಡರಾದ ಒಳಗೆರೆ ಮಂಜಣ್ಣ, ರವಿ, ಕುಮಾರ್, ಶಿಕ್ಷಕರಾದ ಗಾಯತ್ರಮ್ಮ ಆರ್., ದಿನೇಶ್ ಪಿ., ಲೋಕಪ್ಪ ಕೆ., ಸಾವಿತ್ರಮ್ಮ ಎಸ್.ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.