ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶನ ಸ್ವಾಗತಕ್ಕೆ ಸಜ್ಜಾದ ಹಾಸನ

ಪಿಒಪಿ ಮೂರ್ತಿಗಳ ಮಾರಾಟ ಸಂಪೂರ್ಣ ನಿಷೇಧ: ಜಲಮೂಲಗಳಲ್ಲಿ ಮೂರ್ತಿ ವಿಸರ್ಜನೆಗೆ ನಿರ್ಬಂಧ
Published 1 ಸೆಪ್ಟೆಂಬರ್ 2024, 13:33 IST
Last Updated 1 ಸೆಪ್ಟೆಂಬರ್ 2024, 13:33 IST
ಅಕ್ಷರ ಗಾತ್ರ

ಹಾಸನ: ಶ್ರಾವಣ ಮಾಸ ಮುಗಿಯುತ್ತಿದ್ದಂತೆಯೇ ಗಣೇಶನ ಸ್ವಾಗತಕ್ಕೆ ಎಲ್ಲೆಡೆಯೂ ಸಿದ್ಧತೆಗಳು ಭರದಿಂದ ಸಾಗುತ್ತವೆ. ಈ ಬಾರಿ ಉತ್ತಮ ಮಳೆಯಾಗಿದ್ದು, ನದಿ, ಕೆರೆ, ಹಳ್ಳಗಳು ತುಂಬಿವೆ. ಹೀಗಾಗಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಈ ಬಾರಿ ಜನರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಸ್ಥಾನಮಾನವಿದೆ. ಗಣೇಶ ಮೂರ್ತಿಯನ್ನು ಸಂಘ-ಸಂಸ್ಥೆಗಳು, ಯುವಕರ ಬಳಗ ಸೇರಿದಂತೆ ಮನೆಗಳಲ್ಲಿ ಇಟ್ಟು, ಪೂಜಿಸಿ, ಇಂತಿಷ್ಟು ದಿನದ ಬಳಿಕ ಸಂಪ್ರದಾಯದಂತೆ ಕೆರೆ, ನದಿ, ಬಾವಿಗಳಲ್ಲಿ ವಿಸರ್ಜನೆ ಮಾಡುವುದು ರೂಢಿಯಲ್ಲಿದೆ.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಿಒಪಿ ಬಳಕೆ ಮಾಡದೇ, ಪರಿಸರಸ್ನೇಹಿ ಮೂರ್ತಿಯನ್ನು ತಯಾರಿಸಿ ಮಾರಾಟ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲಾಡಳಿತವು ಸಹ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಿರ್ದೇಶನ ನೀಡಿದೆ.

20 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ ಸುತ್ತಲಿನ ಕೆರೆ ಮಣ್ಣಿನಿಂದ ಮೂರ್ತಿಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಮೂರು ತಿಂಗಳ ಮುಂಚೆ ಮಣ್ಣನ್ನು ಸಂಗ್ರಹಿಸಿ, ತಮಿಳುನಾಡಿನಿಂದ ತಂದ ವಿಶೇಷ ಯಂತ್ರದ ಮೂಲಕ ಮಣ್ಣಿನಿಂದ ಕಲ್ಲನ್ನು ಬೇರ್ಪಡಿಸಿ, ಮೂರ್ತಿ ತಯಾರಿಕೆ ಮಾಡುವ ಹದಕ್ಕೆ ಮಣ್ಣನ್ನು ತಯಾರಿಸಲಾಗುತ್ತದೆ. ಸರ್ಕಾರದ ನಿರ್ದೇಶನದಂತೆ ಪರಿಸರಸ್ನೇಹಿ ಬಣ್ಣ ಬಳಸಲಾಗುತ್ತಿದ್ದು, ಬಣ್ಣವನ್ನು ಬಳಸದೆಯೂ ಕೇವಲ ಮಣ್ಣಿನ ಮೂರ್ತಿಗಳನ್ನು ಸಹ ಮಾಡಲಾಗುತ್ತಿದೆ ಎಂದು ಮೂರ್ತಿ ತಯಾರಿಕರು ಹೇಳುತ್ತಿದ್ದಾರೆ.

ಅರಸೀಕೆರೆಯ ರಾಮಸಾಗರ ಸುತ್ತಲಿನ ಕೆರೆ ಮಣ್ಣಿನಿಂದ ಬಣ್ಣರಹಿತ ಹಾಗೂ ಪರಿಸರ ಸ್ನೇಹಿ ಬಣ್ಣದ ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳಿಗೆ ₹ 500ರಿಂದ ₹ 2 ಸಾವಿರದವರೆಗೆ ಬೆಲೆ ನಿಗದಿಯಾಗಿದೆ. ಇನ್ನು ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುವ ದೊಡ್ಡ ವಿಗ್ರಹಗಳನ್ನು ಕೋಲಾರ ಹಾಗೂ ತಮಿಳುನಾಡಿನಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇಂತಹ ಮೂರ್ತಿಗಳ ಬೆಲೆ ₹15 ಸಾವಿರದಿಂದ ಆರಂಭವಾಗುತ್ತದೆ.

ಇನ್ನೂ ಹಲವೆಡೆ ಕಾಗದ, ರಟ್ಟು ಹಾಗೂ ನೈಸರ್ಗಿಕವಾಗಿ ಸಿಗುವ ಮೇಣವನ್ನು ಬಳಸಿ ಎತ್ತರದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈ ಮೂರ್ತಿಗಳು ₹ 20ಸಾವಿರದಿಂದ ₹ 40 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ.

ನಗರಸಭಾ ವ್ಯಾಪ್ತಿಯಲ್ಲಿ ಈ ಆದೇಶವನ್ನು ಉಲ್ಲಂಘಿಸುವ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ಪರಿಸರ ನಿಯಮಗಳನ್ವಯ ವಾಯು ಮತ್ತು ಜಲ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪರಿಸರ ಸ್ನೇಹಿ ಗಣೇಶೋತ್ಸವ:

ಪರಿಸರ ಸ್ನೇಹಿ ವಿಗ್ರಹಗಳನ್ನು ಮತ್ತು ಹಸಿರು ಪಟಾಕಿಗಳ ಬಳಕೆ ಮಡುವ ಮೂಲಕ ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಹಾಸನ ನಗರಸಭೆ ಪೌರಾಯುಕ್ತ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಮಾರಾಟ ಮಾಡಲು ನಗರಸಭೆ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.

ಹಿರೀಸಾವೆ ಹೋಬಳಿಯ ಗ್ರಾಮಗಳಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮೂರ್ತಿಗಳನ್ನು ಕೂರಿಸಲು ವಿವಿಧ ಸಂಘ ಸಂಸ್ಥೆಗಳು, ಯುವಕರ ಗುಂಪುಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಹೋಬಳಿಯಲ್ಲಿ ಪಿಒಪಿ ಗೌರಿ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಕರು ಇಲ್ಲ. ಹಿರೀಸಾವೆಯ ಜನತಾ ಹೌಸ್ ಬಡಾವಣೆಯಲ್ಲಿ ಕಲಾವಿದರು ಮಣ್ಣಿನ ಗಣೇಶ ಮೂರ್ತಿಗಳ ತಯಾರಿಸಿದ್ದು, ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮತ್ತು ವಿಸರ್ಜನೆಯ ಬಗ್ಗೆ ಗ್ರಾಮಗಳಿಂದ ಮತ್ತು ಸಂಘ-ಸಂಸ್ಥೆಗಳಿಂದ ಬೀಟ್ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಹಿ.ಕೃ. ಚಂದ್ರು, ಎಂ.ಪಿ. ಹರೀಶ್‌

ಹಿರೀಸಾವೆಯಲ್ಲಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳಿಗೆ ಕಲಾವಿದರು ಬಣ್ಣ ಹಚ್ಚುತ್ತಿರುವು.
ಹಿರೀಸಾವೆಯಲ್ಲಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳಿಗೆ ಕಲಾವಿದರು ಬಣ್ಣ ಹಚ್ಚುತ್ತಿರುವು.
ಆಲೂರು ಕಸಬಾ ಭೈರಾಪುರ ಗ್ರಾಮದ ಕಲಾವಿದ ಲತೇಶ್ ಪರಿಸರ ಗಣಪತಿ ಮಾಡಿರುವುದು.
ಆಲೂರು ಕಸಬಾ ಭೈರಾಪುರ ಗ್ರಾಮದ ಕಲಾವಿದ ಲತೇಶ್ ಪರಿಸರ ಗಣಪತಿ ಮಾಡಿರುವುದು.
ಮಾರಾಟಕ್ಕೆ ಸಿದ್ಧವಾಗಿರುವ ಗಣೇಶ ಮೂರ್ತಿಗಳು.
ಮಾರಾಟಕ್ಕೆ ಸಿದ್ಧವಾಗಿರುವ ಗಣೇಶ ಮೂರ್ತಿಗಳು.
ಹಾಸನದಲ್ಲಿ ತಯಾರಿಸಿರುವ ಮಣ್ಣಿನ ಗಣಪ
ಹಾಸನದಲ್ಲಿ ತಯಾರಿಸಿರುವ ಮಣ್ಣಿನ ಗಣಪ

ವಿಸರ್ಜನೆಗೆ ವ್ಯವಸ್ಥೆ

ಗೌರಿ-ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ಹಾಸನ ನಗರಸಭೆಯಿಂದ ನೀರು ತುಂಬಿದ ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಮತ್ತು ತಾತ್ಕಾಲಿಕ ಗುಂಡಿಗಳನ್ನು ಕೆಲವು ಸ್ಥಳಗಳಲ್ಲಿ ಮಾಡಲಾಗಿದೆ. ಎಲ್ಲೆಲ್ಲಿ ಎಷ್ಟು ನೀರಿನ ಟ್ಯಾಂಕರ್: ಹೌಸಿಂಗ್ ಬೋರ್ಡ್‌ ಮಿನಿ ವಿಧಾನ ಸೌಧದ ಹತ್ತಿರ  2 ಕುವೆಂಪು ನಗರ ಗಣಪತಿ ದೇವಸ್ಥಾನದ ಹತ್ತಿರ 1 ಸಾಲಗಾಮೆ ರಸ್ತೆ ಅರಳೀಕಟ್ಟೆ ಹತ್ತಿರ 2 ಹೊಸಲೈನ್ ರಸ್ತೆ ಬಸವೇಶ್ವರ ಕಲ್ಯಾಣ ಮಂಟಪದ ಹತ್ತಿರ 1 ಶಂಕರಮಠದ ರಸ್ತೆ ಶಂಕರ ಮಠದ ಮುಂಭಾಗ 1 ಕರೀಗೌಡ ಕಾಲೊನಿ ಯುನೈಟೆಡ್ ಸ್ಕೂಲ್ ಹತ್ತಿರ 1 (ಉಡಸಲಮ್ಮ ದೇವಸ್ಥಾನ) ಹಾಸನಾಂಬ ವೃತ್ತ 3 ದೇವಿಗೆರೆ ವೃತ್ತ 3 ತಣ್ಣೀರು ಹಳ್ಳ ವೃತ್ತದ ಹತ್ತಿರ 1 ಎಂ.ಜಿ. ರಸ್ತೆ ಆದಿಚುಂಚನಗಿರಿ ಕಲ್ಯಾಣ ಮಂಟಪದ ಹತ್ತಿರ 1 ಆಡುವಳ್ಳಿ ಅರಳೀಮರದ ಮುಂಭಾಗ 1 ಹೌಸಿಂಗ್ ಬೋರ್ಡ್ ಮುಖ್ಯ ರಸ್ತೆ ಪೃಥ್ವಿ ಚಿತ್ರ ಮಂದಿರ ಹಾಗೂ ಸ್ಕೌಟ್ ಭವನ ಮದ್ಯಭಾಗ 1 ಕೆ.ಆರ್. ಪುರಂ ಹೈಸ್ಕೂಲ್ ಫೀಲ್ಡ್ 1 ಹೇಮಾವತಿನಗರ ಮಾಜಿ ಶಾಸಕರ ಮನೆ ಮುಂಭಾಗದ ಟ್ರಾನ್ಸ್ಫಾರ್ಮರ್ ಹತ್ತಿರದ ಪಾರ್ಕ್ ಒಳಭಾಗ 1 ಸಾಲಗಾಮೆ ರಸ್ತೆ ಆಕಾಶವಾಣಿ ಹತ್ತಿರ 1 ಸಿದ್ದಯ್ಯನಗರ;1 ಪಿ.ಡಬ್ಲ್ಯುಡಿ ಕಾಲೊನಿ ರವೀಂದ್ರನಗರ ಟ್ಯಾಂಕ್ ಹತ್ತಿರ 1 ಶಾಂತಿನಗರ 3ನೇ ಮೇನ್ 6ನೇ ಕ್ರಾಸ್ ರುದ್ರೇಗೌಡರ ಜಾಗದ ಮುಂಭಾಗ 1 ಸಾಲಗಾಮೆ ರಸ್ತೆ ಬಾಗಡೇರ ಕೊಪ್ಪಲು ದೇವಸ್ಥಾನದ ಹತ್ತಿರ 1 ಲಕ್ಷ್ಮೀಪುರಂ ಜವೆನಹಳ್ಳಿ ಮಠದ ಮುಂಭಾಗ 1 ಚನ್ನಪಟ್ಟಣ ಬಡಾವಣೆ ಕೋರ್ಟ್ ಮುಂಭಾಗ 1  ಡಾಂಗೆ ಕಣ್ಣಿನ ಆಸ್ಪತ್ರೆ ಹತ್ತಿರ 1 ತಾತ್ಕಾಲಿಕ ಗುಂಡಿ: ವಸ್ತು ಪ್ರದರ್ಶನ ಆವರಣ ಮುಖ್ಯ ಪ್ರವೇಶ ದ್ವಾರದ ಬಳಿ ಮಹಾರಾಜ ಪಾರ್ಕ್ ಒಳಭಾಗ ಸುಧಾ ಹೋಟೆಲ್ ಎದುರು ಸಾಲಗಾಮೆ ರಸ್ತೆ ಮಾರ್ನಾಮಿ ಮಂಟಪ ಮುಂಭಾಗದಲ್ಲಿ ತಾತ್ಕಾಲಿಕ ಗುಂಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಳದಲ್ಲಿ ಮೂರ್ತಿ ವಿಸರ್ಜಿಸಿ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸುವ ಗಣಪತಿ ಪೂಜೆಯಲ್ಲಿ ಜಾತಿ– ಮತ ಎಣಿಸದೇ ಸಹಕರಿಸುತ್ತಿರುವುದು ಸಂತಸದ ಸಂಗತಿ. ಮಹೋತ್ಸವ ಮುಗಿದ ನಂತರ ಸರ್ಕಲ್‍ನಲ್ಲಿ ಮೀಸಲಿರುವ ಕೊಳದಲ್ಲಿ ಮೂರ್ತಿ ವಿಸರ್ಜಿಸಲು ಸೂಚನೆ ನೀಡಲಾಗಿದೆ. ಸ್ಟೀಪನ್ ಪ್ರಕಾಶ್ ಮುಖ್ಯಾಧಿಕಾರಿಗಳು ಆಲೂರು ಪ.ಪಂ. ಭಾವೈಕ್ಯಕ್ಕೆ ಧಕ್ಕೆ ಬರದಿರಲಿ ಶಬ್ಧ ಮಾಲಿನ್ಯ ಮಾಡಬಾರದು. ಅಹಿತಕರ ಘಟನೆಗಳು ಸಂಭವಿಸಿದರೆ ಸಮಿತಿ ನೇರ ಹೊಣೆಯಾಗಬೇಕು. ಭಾವೈಕ್ಯಕ್ಕೆ ಧಕ್ಕೆ ತರಬಾರದು. ಶಾಂತಿ ಮತ್ತು ಭಕ್ತಿಯಿಂದ ಉತ್ಸವ ಆಚರಿಸಲು ಸೂಚಿಸಲಾಗಿದೆ. ಗಂಗಾಧರ್ ಪೊಲೀಸ್ ಇನ್‌ಸ್ಪೆಕ್ಟರ್‌ ಆಲೂರು ಕೃತಕ ತೊಟ್ಟಿಯಲ್ಲಿ ವಿಸರ್ಜನೆ ಮೂರ್ತಿಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ. ಸಾರ್ವಜನಿಕರಿಂದ ಮೂರ್ತಿಗಳನ್ನು ಸಂಗ್ರಹ ಮಾಡಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ವ್ಯವಸ್ಥಿತವಾಗಿ ವಿಸರ್ಜನೆಗೆ ಸೂಚಿಸಲಾಗಿದೆ. ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಪಿಒಪಿ ಮೂರ್ತಿ ಮಾರಾಟ ಇಲ್ಲ ಗೌರಿಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಅಪ್ ಪ್ಯಾರಿಸ್ (ಪಿಒಪಿ) ಮತ್ತು ವಿಷಕಾರಿ ಬಣ್ಣ ಲೇಪನದ ಗೌರಿ ಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನರಸಿಂಹಮೂರ್ತಿ ನಗರ ಸಭೆ ಪೌರಾಯುಕ್ತ ನಿಯಮದಂತೆ ಪ್ರತಿಷ್ಠಾಪನೆ ಗೌರಿ ಗಣೇಶ ಮೂರ್ತಿಗಳನ್ನು ನಿಯಮದಂತೆ ಪ್ರತಿಷ್ಠಾಪನೆ ಮಾಡಬೇಕು. ವಿಸರ್ಜನೆ ಆಗುವವರೆಗೆ ಸುರಕ್ಷತೆ ಮತ್ತು ನಿರ್ವಹಣೆಯನ್ನು ಕೂರಿಸಿದವರೆ  ಮಾಡಬೇಕು. ಸಮಸ್ಯೆಗಳು ಉಂಟಾದರೆ ಅವರೇ ಜವಾಬ್ದಾರರು. ಸಂತೋಷ ಹಿರೀಸಾವೆ ವೃತ್ತದ ಸಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT