ಅರಕಲಗೂಡು: ‘ಅಗತ್ಯವಿದ್ದರೂ ಮೂರು ವರ್ಷಗಳಿಂದ ಒಂದೇ ಒಂದು ನೇಮಕಾತಿ ನಡೆದಿಲ್ಲ. ತೆರಿಗೆ ಹಣ ಲೂಟಿಯಾಗುತ್ತಿದೆ. ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ನಿಮ್ಮದೇ ಹಣವನ್ನು ಸಾಲವಾಗಿ ನೀಡಿ, ಮುಂದಿನ ಪೀಳಿಗೆ ಮೇಲೆ ಹೊರೆ ಹಾಕಲಾಗುತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಕೊಡಕಹಳ್ಳಿ ಗ್ರಾಮದಲ್ಲಿ ಲಕ್ಷ್ಮೀದೇವಿ, ಮಾರಮ್ಮ ಹಾಗೂ ಗ್ರಾಮದೇವತೆಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಿಮಗೆ ₹2ಸಾವಿರ ಕೊಡುತ್ತಿದ್ದಾರೆ. ನಿಮ್ಮ ಮೇಲೆ ಸಾಲ ಹೊರಿಸಿ ಕೊಡಲಾಗುತ್ತಿದೆ. ಇದನ್ನು ರಾಜ್ಯದ ಆರೂವರೆ ಕೋಟಿ ಜನರೇ ತೀರಿಸಬೇಕು. ಅವರೇನು ಮನೆಯಿಂದ ತಂದು ಕೊಡುತ್ತಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಿ’ ಎಂದರು.

‘ನಿಮ್ಮ ಕುಟುಂಬದಲ್ಲಿ ಒಂದು ಮಗು ಜನ್ಮ ತಾಳಿದ ಮೇಲೆ ಆ ಮಗುಗೆ ಶಿಕ್ಷಣ ಕೊಡಬೇಕು. ಏನಾದರೂ ಎಂಜಿನಿಯರಿಂಗ್, ವೈದ್ಯಕೀಯ ಓದಿಸಬೇಕು ಎಂದರೆ ₹1.5 ಕೋಟಿ ಖರ್ಚು ಮಾಡಬೇಕು. ಎಲ್ಲಿಂದ ತರುತ್ತೀರಿ ಆ ದುಡ್ಡನ್ನು. ಇಂತಹ ಕಾರ್ಯಕ್ರಮಗಳ ಮೂಲಕ ನಿಮಗೆ ತಾತ್ಕಾಲಿಕ ಖುಷಿ ಕೊಡಲಾಗುತ್ತಿದೆ. ಮುಂದೆ ದೇಶ ಏನಾಗುತ್ತದೆ ಎನ್ನುವ ಯೋಚನೆ ಮಾಡಬೇಕು’ ಎಂದು ಹೇಳಿದರು.

‘ಯಾವುದೇ ರಾಜ್ಯದಲ್ಲಿ ಚುನಾವಣೆಯಾದರೆ, ₹5ಸಾವಿರ ಕೊಡ್ತೀವಿ, ₹10ಸಾವಿರ ಕೊಡ್ತೀವಿ ಎಂದು ಹೇಳುತ್ತಾರೆ. ಇದು ಬಹಳ ದಿನ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಿ. ಸ್ವಾಭಿಮಾನದಿಂದ ಬದುಕಲು ಏನು ಕಾರ್ಯಕ್ರಮ ಕೊಡುತ್ತಾರೆ ಎಂಬ ಪ್ರಶ್ನೆ ಮಾಡಿ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದ್ದು, ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆ ಹಾಗೂ ಆಟೋಮೊಬೈಲ್ ಕೈಗಾರಿಕೆಗೆ ಉತ್ತೇಜನದ ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದೆ. ದೇಶ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರಿದೆ’ ಎಂದರು.

ತಮ್ಮ ಆರೋಗ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, ‘ಐದು ಬಾರಿ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬದುಕಿ ಬಂದಿದ್ದೇನೆ. ನಿಮ್ಮ ನಂಬಿಕೆ ಹಾಗೂ ವಿಶ್ವಾಸವೇ ನನ್ನ ಶಕ್ತಿ. ದೇವೇಗೌಡರನ್ನು ನೀವು ಬೆಳೆಸಿದ್ದೀರಿ. ಅವರ ಪಕ್ಷವನ್ನು ಉಳಿಸಲು ನಿಮ್ಮ ಆಶೀರ್ವಾದ ಅಗತ್ಯ. ಶಾಸಕ ಎ.ಮಂಜು ಅವರಿಗೆ ಮುಂದೆಯೂ ಜನಾಶೀರ್ವಾದ ಇರಲಿ’ ಎಂದರು.

ತಂಬಾಕು ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಮಾತುಕತೆ ಪ್ರಗತಿಯಲ್ಲಿದ್ದು, ಬೆಳೆಗಾರರು ಆತಂಕಪಡಬೇಡಿ. ನಿಮ್ಮೊಂದಿಗೆ ಸದಾ ಇದ್ದೇವೆ ಎಂದು ಭರವಸೆ ನೀಡಿದರು.

ಹಿಂದೆ ಮೂಲಸೌಕರ್ಯ ಕಡಿಮೆಯಿದ್ದರೂ ನೆಮ್ಮದಿಯ ಜೀವನ ಇತ್ತು. ಇಂದು ಕುಟುಂಬದಲ್ಲಿ ಬಂಧುತ್ವ ಕುಸಿಯುತ್ತಿದೆ. ನೆಮ್ಮದಿಗಾಗಿ ಮನಸ್ಸಿನ ಚಂಚಲತೆಯಿಂದ ದೂರವಿದ್ದು, ಕುಟುಂಬದ ದಾರಿ ತಪ್ಪದಂತೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಗ್ರಾಮದಲ್ಲಿ ಮೂರು ದೇವಾಲಯಗಳ ಉದ್ಘಾಟನೆ ನಡೆಯುತ್ತಿರುವುದು ಸಂತಸದ ಸಂಗತಿ. ಶುಕ್ರವಾರ ವಿಜಯಪುರದಲ್ಲಿ ಬಿಜಾಪುರದಲ್ಲಿ ಕಾರ್ಯಕ್ರಮ ಇದೆ. ಇಂದೇ ದೇವಾಲಯಗಳಿಗೆ ಪೂಜೆ ಸಲ್ಲಿಸುವ ಅವಕಾಶ ನೀಡಿದ ಗ್ರಾಮಸ್ಥರಿಗೆ ಧನ್ಯವಾದ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಸಾ.ರಾ. ಮಹೇಶ್, ಹೊನ್ನವಳ್ಳಿ ಸತೀಶ್, ದೊಡ್ಡಮಗ್ಗೆ ರಾಜೇಗೌಡ, ರಘು, ಅಶ್ವಿನ್ ಕುಮಾರ್, ನರಸೇಗೌಡ, ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಜನರ ಮೇಲೆ ಸಾಲದ ಹೊರೆಯಾದ ಸರ್ಕಾರದ ‘ಗ್ಯಾರಂಟಿ’ ತಂಬಾಕು ಬೆಳೆಗಾರರ ಸಮಸ್ಯೆ; ಕೇಂದ್ರ ಸಚಿವರೊಂದಿಗೆ ಮಾತುಕತೆ ಪ್ರಗತಿಯಲ್ಲಿ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರಿದ ಭಾರತ

ಇಂದು ಮೂರು ದೇವಸ್ಥಾನಗಳನ್ನು ಉದ್ಘಾಟಿಸುವ ಭಾಗ್ಯ ನನಗೂ ಹಾಗೂ ಕುಮಾರಸ್ವಾಮಿ ಅವರಿಗೆ ದೊರೆತಿದೆ. ದೇವಾಲಯ ಕಟ್ಟಿದರೆ ಮಾತ್ರ ಸಾಲುವುದಿಲ್ಲ. ನಿತ್ಯ ಪೂಜೆ-ಪುನಸ್ಕಾರಗಳು ನಡೆಯಬೇಕು

–ಎ.ಮಂಜು ಶಾಸಕ

ಜನರ ಬದುಕಿನ ಜೊತೆ ಚೆಲ್ಲಾಟ: ಕುಮಾರಸ್ವಾಮಿ

ಅರಕಲಗೂಡು: ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಜನಗಳ ಬಗ್ಗೆ ಭಯ ಭಕ್ತಿ ಇಲ್ಲ ಅವರಿಗೆ. ಈ ಸರ್ಕಾರ ಜನವಿರೋಧಿ ಎಂಬುದು ಮನೆ ಮನೆ ಮಾತಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ತಾಲ್ಲೂಕಿನ ಕೊಡಕಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆದಾಗ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಇದೆ ಎಂದು ಹೇಳಿದ್ದರು. ಈಗಲೂ ಅಷ್ಟೇ ಸಿಬ್ಬಂದಿ ಕೊರತೆ ಇದೆ. ಒಳಮೀಸಲಾತಿ ಸಮಸ್ಯೆಯಿಂದ ನೇಮಕ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಕ್ಯಾಬಿನೆಟ್ನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. 76 ಸಾವಿರ ಶಿಕ್ಷಕರ ಕೊರತೆ ಇದೆ. ಆರೋಗ್ಯ ಇಲಾಖೆ ಪಶುಸಂಗೋಪನೆ ಕೃಷಿ ಇಲಾಖೆಯಲ್ಲೂ ನೇಮಕಾತಿಗೆ ಆದ್ಯತೆ ಕೊಡಲಿಲ್ಲ ಎಂದು ದೂರಿದರು. ಧಾರವಾಡದಲ್ಲಿ ಐಎಎಸ್ ಕೆಎಎಸ್ ತರಬೇತಿ ಕೊಡಲು ದೊಡ್ಡಮಟ್ಟದ ಬಿಲ್ಡಿಂಗ್ ಕಟ್ಟಿಸಿದ್ದಾರೆ. ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿಲ್ಲ. ಅವರನ್ನು ಬೀದಿಗೆ ತಂದು ನಿಲ್ಲಿಸಿರುವುದೇ ಸರ್ಕಾರದ ದೊಡ್ಡ ಕೊಡುಗೆ ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿರುವುದು ನಿಜವೇ ಆಗಿದ್ದರೆ ಸರ್ಕಾರ ಸರಿಯಾದ ರೀತಿ ತನಿಖೆ ನಡೆಸಬೇಕು. ಅದ್ಭುತವಾಗಿ ಕೆಲಸ ಮಾಡುತ್ತಿದೆ ಎಂದು ಎಸ್ಐಟಿಗೆ ಬಹುಮಾನ ಕೊಡುತ್ತಾರೆ. ಆ ಎಸ್ಐಟಿ ಮೂಲಕ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. ನನಗೆ ಮೊದಲು ಈ ಕೆಟ್ಟ ರೀತಿಯ ಸರ್ಕಾರ ಹೋಗಬೇಕು. ಅದಕ್ಕಾಗಿ ನಮ್ಮ ಸ್ನೇಹಿತರ ಜೊತೆ ಮೈತ್ರಿಯಲ್ಲಿ ಹೋರಾಟ ಮಾಡಬೇಕು ಎನ್ನುವುದು ಇದೆ. ಆಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನೋಡೋಣ. ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲೇಬೇಕು. ನೋಡೋಣ ಏನು ಮಾಡುತ್ತಾರೆ. ನಾವು ಚುನಾವಣೆಗೆ ಸಿದ್ದರಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.