ಹೊಳೆನರಸೀಪುರ: ‘ನಮ್ಮೂರಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಿ 45 ವರ್ಷಗಳಾಗಿದ್ದು, ಪೈಪ್ಗಳೆಲ್ಲ ಒಡೆದು ಹೋಗಿವೆ. ಪಟ್ಟಣದ ಜನಸಂಖ್ಯೆ ಹೆಚ್ಚಾಗಿದ್ದು, ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ₹126 ಕೋಟಿ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಬರೆದಿದ್ದೇವೆ. ಹಣ ಬಿಡುಗಡೆ ಆಗಿಲ್ಲ. ಹಣ ಬಿಡುಗಡೆ ಆಗುತ್ತಿದ್ದಂತೆ ಕೆಲಸ ಪ್ರಾರಂಭಿಸಲಾಗುವುದು ’ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ರಥೋತ್ಸವಕ್ಕೆ ಪುರಸಭೆಯಿಂದ ₹2 ಲಕ್ಷ ನೀಡಲಾಗುವುದು. ಅಂಬೇಡ್ಕರ್ ನಗರದಲ್ಲಿ ಚಿತಾಗಾರ ನಿರ್ಮಾಣ, 24X7 ಶುದ್ದ ಕುಡಿಯುವ ನೀರು ಸರಬರಾಜಿಗೆ ಪೈಪ್ ಅಳವಡಿಸಿ, ಸರಿಯಾಗಿ ಮುಚ್ಚದಿರುವ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಪಟ್ಟಣದ ಮಹಾತ್ಮಗಾಂಧಿ ಉದ್ಯಾನದ ಅಭಿವೃದ್ದಿಗೆ ₹5 ಕೋಟಿ ಕೊಡಿಸಿದ್ದೇನೆ. ತಕ್ಷಣ ಕೆಲಸ ಪ್ರಾರಂಭಿಸಲಾಗುವುದು. ಶಿಕ್ಷಕರ ಭವನ ಅಭಿವೃದ್ದಿಗೆ ₹25 ಲಕ್ಷ ನೀಡಲಾಗಿದೆ. 1ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದು, ಅದರಲ್ಲಿ 450 ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿದೆ. ಶಾಂತಿ ವಾಹನ ಮತ್ತು ಸ್ಮಶಾನದ ಅಭಿವೃದ್ದಿಗೆ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ನಗರದ ನಿವಾಸಿ ಮುತ್ತುರಾಜ್, ‘ಪೇಟೆ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಇರುವ ಚರಂಡಿ ಸ್ಲಾಬ್ಗಳು ಸಮನಾಗಿಲ್ಲದೇ ನಿತ್ಯ ಜನರು ಬೀಳುತ್ತಿದ್ದಾರೆ. ಇವುಗಳನ್ನು ಸರಿಪಡಿಸಿ ಎಂದು ಹಲವಾರು ಬಾರಿ ಹೇಳಿದ್ದರೂ ಕ್ರಮತೆಗೆದುಕೊಂಡಿಲ್ಲ ಎಂದು ದೂರಿದರು. ಟೆಂಡರ್ ಕರೆಯಲಾಗಿದೆ’ ಎಂದು ಪುರಸಭೆ ಎಂಜಿನಿಯರ್ ಉತ್ತರಿಸಿದರು.

‘ಪುರಸಭೆಯಿಂದ ಜನರಿಗೆ ಅನುಕೂಲ ಕಲ್ಪಿಸಿ ಎಂದು ಕೇಳಿದರೆ ಹಣ ಇಲ್ಲ ಎನ್ನುತ್ತೀರಿ. ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ, ಮನೆಗಳ ಕಂದಾಯ, ನೀರಿನ ತೆರಿಗೆ ವಸೂಲಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಿ ಎಂದು ಶಂಕರ್ ನಾರಾಯಣ್ ಏತಾಳ್ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಡಿ.ರೇವಣ್ಣ, ಬಾಡಿಗೆ, ಕಂದಾಯ, ನೀರಿನ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ’ ಎಂದರು.

‘ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಎಲ್ಲೆಂದರಲ್ಲಿ, ಹೇಗೆಂದೆರೆ ಹಾಗೆ ವಾಹನಗಳು ನಿಲ್ಲುತ್ತಿದೆ ಹಾಗೂ ಪೇಟೆ ಮುಖ್ಯರಸ್ತೆಯಲ್ಲಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನಗಳ, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ. ಕೋಟೆ ಮುಖ್ಯರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಯನ್ನು, ಪೇಟೆ ಮುಖ್ಯರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರ ನಿಷೇಧಿಸಿ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಪ್ರಸನ್ನ ಸಲಹೆ ನೀಡಿದರು.

‘ಪೊಲೀಸರ ಸಹಕಾರ ಪಡೆದು ಕೂಡಲೇ ಕ್ರಮ ತೆಗೆದುಕೊಳ್ಳಿ. ಒಂದು ವೇಳೆ ಯಾವುದೇ ಅಪಘಾತ, ಅನಾಹುತ ಆದರೆ ನೀವು ಮತ್ತು ಪೊಲೀಸರು ಹೊಣೆ ಹೊರಬೇಕಾಗುತ್ತದೆ’ ಎಂದು ಶಾಸಕ ರೇವಣ್ಣ, ಮುಖ್ಯಾಧಿಕಾರಿ ಶಿವಶಂಕರ್ ಅವರಿಗೆ ಎಚ್ಚರಿಸಿದರು.

ಪುರಸಭೆ ಪರಿಸರ ಎಂಜಿನಿಯರ್ ರುಚಿದರ್ಶಿನಿ, ವ್ಯವಸ್ಥಾಪಕಿ ಜಯಲಕ್ಷ್ಮೀ, ರಮೇಶ್, ಪುರಸಭೆಯ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ವಾಹನಗಳಲ್ಲಿ ಹಸಿ ಒಣ ಕಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ

ಪುರಸಭೆಯವರು ತಮ್ಮ ವಾಹನಗಳಲ್ಲಿ ನಿತ್ಯ ಹಸಿಕಸ ಒಣಕಸ ಬೇರೆ ಬೇರೆ ನೀಡಿ ಎಂದು ಪ್ರಚಾರ ಮಾಡುತ್ತಾರೆ. ಸಾರ್ವಜನಿಕರು ಕಸವನ್ನು ಬೇರೆ ಮಾಡಿರುತ್ತಾರೆ. ಆದರೆ ಈ ಕಸವನ್ನು ಬೇರೆ ಬೇರೆ ಹಾಕಿಸಿಕೊಳ್ಳಲು ಕಸದ ವಾಹನದಲ್ಲಿ ವ್ಯವಸ್ಥೆ ಇಲ್ಲದೆ ಹಸಿಕಸ ಒಣಕಸ ಒಂದೇ ಕಡೆ ಹಾಕಿಸಿಕೊಳ್ಳುತ್ತಾರೆ ಎಂದು ನಗರದ ನಾಗರಿಕ ಸುರೇಶ್ಕುಮಾರ್ ದೂರಿದರು. ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ನೀವು ಹಸಿಕಸ ಒಣಕಸ ಸಂಗ್ರಹಿಸಲು ಬೇರೆ ಬೇರೆ ವ್ಯವಸ್ಥೆ ಮಾಡಿ. ನಂತರ ಪ್ರಚಾರ ಮಾಡಿ. ಈ ಬಗ್ಗೆ ಆದಷ್ಟು ಬೇಗೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಪರಿಸರ ಎಂಜಿನಿಯರ್ಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.