ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ನಿರಂತರ ಮಳೆಯಿಂದ ಬಿತ್ತನೆಗೆ ತೊಡಕು

Published 23 ಮೇ 2023, 14:39 IST
Last Updated 23 ಮೇ 2023, 14:39 IST
ಅಕ್ಷರ ಗಾತ್ರ

ಆಲೂರು: ಭಾನುವಾರ ಹಾಗೂ ಮಂಗಳವಾರ ಬಿದ್ದ ಬಾರಿ ಮಳೆಯಿಂದ ಹೊಲಗಳಲ್ಲಿ ತೇವಾಂಶ ಅತಿಯಾಗಿದ್ದು ಬಿತ್ತನೆ ಮಾಡಲು ಸಾಧ್ಯವಾಗದೆ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಸುಕಿನ ಜೋಳ ಬಿತ್ತನೆ ಮಾಡಲು ಈಗಾಗಲೆ ರೈತರು ಹೊಲಗಳನ್ನು ಹದ ಮಾಡಿಕೊಳ್ಳುವ ಮೂಲಕ ತಯಾರಿ ನಡೆಸಿದ್ದರು. ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಸಂತಸಗೊಂಡಿದ್ದರು. ಮಳೆ ಬಂದು ತೇವಾಂಶವಿದ್ದುದರಿಂದ ಬುಧವಾರ ಬಿತ್ತನೆಗೆ ತಯಾರಿ ನಡೆಸಿದ್ದರು.

‘ಮುಸುಕಿನ ಜೋಳ ಬಿತ್ತನೆ ಮಾಡಿ ಒಂದು ತಿಂಗಳಾಗಬೇಕಾಗಿತ್ತು. ಆದರೆ ಮಳೆ ಇಲ್ಲದೆ ತಡವಾಯಿತು. ಈಗ ನಿರಂತರ ಮಳೆಯಾಗುತ್ತಿದ್ದು, ಹೈಟೆಕ್ ಬಿಟ್ಟು 130-150 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ಜೋಳದ ತಳಿ ಬಿತ್ತನೆ ಮಾಡಬೇಕು. ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ದೊರಕುತ್ತದೆ. ರೈತರು ನಿರಾಶರಾಗದಿರಿ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಡಿ. ಮನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT