‘ಹಾಸನದಲ್ಲಿ ಕೈಗಾರಿಕಾ ಭೂಮಿಯ ಅವಶ್ಯಕತೆ ತುಂಬಾ ಇದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಾರಂಭಿಸುವಂತೆ ಕೈಗಾರಿಕೆ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಎಫ್‌ಕೆಸಿಸಿಐ ನಿರ್ದೇಶಕ ಎಚ್.ಕೆ. ಕಿರಣ್ ತಿಳಿಸಿದ್ದಾರೆ. ‘ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಂ ಆರ್. ಕಾರ್ಯದರ್ಶಿ ಸುದರ್ಶನ ಅವರೊಂದಿಗೆ ಸಚಿವರನ್ನು ಭೇಟಿ ಮಾಡಲಾಗಿದೆ. ನೆಲಮಂಗಲದಿಂದ 1 ಗಂಟೆಯ ದೂರದಲ್ಲಿರುವ ಹಿರೀಸಾವೆ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ಶೀಘ್ರದಲ್ಲಿ ಮಾಡಬೇಕು. ದುದನೂರ ಕಾವಲು ಕೈಗಾರಿಕಾ ಪ್ರದೇಶದಲ್ಲಿ ಸಿವಿಲ್ ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆಯೂ ಒತ್ತಾಯಿಸಲಾಗಿದೆ’ ಎಂದರು.