ಸಕಲೇಶಪುರ: ಬಿಸಿಲಿನ ತಾಪ ಹೆಚ್ಚಾದಂತೆ ವಾತಾವರಣದಲ್ಲಿ ಬದಲಾವಣೆಯಾಗಿ ಕಾಂಡಕೊರಕ ಕೀಟಗಳು ಸಂತಾನೋತ್ಪತ್ತಿಯೂ ಹೆಚ್ಚಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಡಾ.ಬಿ.ವಿ. ರಂಜೀತ್ ಕುಮಾರ್ ಹೇಳಿದರು.

ದಿ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರವಂಕೂರ್ ಹಾಗೂ ರೋಟರಿ ಸಂಸ್ಥೆ ವತಿಯಿಂದ ಶನಿವಾರ ನಡೆದ ಕಾಫಿ ಪ್ಲಾಂಟರ್ಸ್ ಮೀಟ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ವಿಶೇಷವಾಗಿ ಅರೇಬಿಕಾ ಗಿಡಗಳಿಗೆ ಪ್ರಸಕ್ತ ಸಾಲಿನಲ್ಲಿ ಬಿಳಿ ಕಾಂಡಕೊರಕ ಕೀಟಗಳ ಬಾದೆ ಹೆಚ್ಚಾಗಿದೆ. ರೋಗ ಪೀಡಿತ ಗಿಡಗಳನ್ನು ಬುಡ ಸಹಿತ ಕಿತ್ತು ಬೆಂಕಿಯಿಂದ ಸುಟ್ಟುಹಾಕಬೇಕು. ಕೆಲವರು ರೋಗ ಪೀಡಿತ ಗಿಡಗಳನ್ನು ಕಿತ್ತು ತೋಟದ ಪಕ್ಕದಲ್ಲಿ ಹಾಕುತ್ತಾರೆ. ಇದರಿಂದ ಆ ಕೀಟಗಳನ್ನು ಬೇರೆ ಗಿಡಗಳಿಗೂ ಸಹ ಹರಡಿ ಆರೋಗ್ಯವಂತ ಗಿಡಗಳನ್ನು ಸಹ ಹಾನಿ ಮಾಡುತ್ತವೆ’ ಎಂದರು.

ಬೆಳೆಗಾರರು ಸಮೀಪದ ಕಾಫಿ ಮಂಡಳಿ ವಿಸ್ತರಣಾ ಕಚೇರಿಗೆ ಭೇಟಿ ನೀಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.

ಇಲ್ಲಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ. ಪ್ರಕಾಶ್ ಕುಮಾರ್ ಮಾತನಾಡಿ, ‘ಸರ್ಕಾರದ ಸೌಲಭ್ಯಗಳನ್ನು ಅರ್ಹ ರೈತರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಕಾಲ ಮಿತಿಯೊಳಗೆ ಪಡೆದುಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಸಾಕಷ್ಟು ಪ್ರಚಾರಗಳನ್ನು ಸರ್ಕಾರವೇ ಮಾಡುತ್ತಿದೆ. ಇಲಾಖೆಯ ಕಚೇರಿಯಲ್ಲಿ ಯೂ ಸಹ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ಪ್ರಚಾರ ಮಾಡಲಾಗುತ್ತಿದೆ’ ಎಂದರು.

ಪ್ಯಾಕ್ಟ್ ಸಂಸ್ಥೆಯ ಡಿಜಿಎಂ ಕೆ. ರಾಮ್ಸುಧಾಕರ್, ಸಂಸ್ಥೆಯ ವಲಯ ವ್ಯವಸ್ಥಾಪಕ ಎಸ್. ವಿನಾಯಕ, ಸಹನಾ ಪ್ಲಾಂಟೇಷನ್ ಮಾಲೀಕ ಸಹನಾ ಶಶಿಧರ್, ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಜಿ. ಚಂದ್ರಶೇಖರ್, ಕಾರ್ಯದರ್ಶಿ ಎಂ.ಡಿ. ವಿಜಿತ್ ಕುಮಾರ್, ಪ್ಯಾಕ್ಟ್ ಅಸಿಸ್ಟೆಂಟ್ ಮೇನೇಜರ್ ಎಂ.ಎನ್. ಪದ್ಮಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.