ಬುಧವಾರ, ಜೂನ್ 16, 2021
28 °C

ಮೂರನೇ ದಿನವೂ ಗುಣಮುಖರ ಸಂಖ್ಯೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಹೊಸ ಪ್ರಕರಣಗಳಿಗಿಂತ ಚೇತರಿಕೆ ಹೊಂದಿದವರ ಸಂಖ್ಯೆ ಹೆಚ್ಚಿದ್ದು,  ಸೋಂಕಿತರು ಹಾಗೂ ಮರಣ ಪ್ರಮಾಣ ದರ ತುಸು ತಗ್ಗಿದೆ.

ಹೊಸದಾಗಿ ಗುರುವಾರ 897 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 16
ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 68861ಕ್ಕೆ ಏರಿಕೆಯಾಗಿದೆ. ಈ ಪೈಕಿ 54845 ಮಂದಿ
ಗುಣಮುಖರಾಗಿದ್ದಾರೆ. 

1570 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  13,133
ಸಕ್ರಿಯ ಪ್ರಕರಣಗಳ ಪೈಕಿ 131 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 883. 

ಹೊಸದಾಗಿ ಆಲೂರು ತಾಲ್ಲೂಕಿನ 39, ಅರಕಲಗೂಡು 127, ಅರಸೀಕೆರೆ 87, ಬೇಲೂರು 67, ಚನ್ನರಾಯಪಟ್ಟಣ 92, ಹಾಸನ 313, ಹೊಳೆನರಸೀಪುರ 116, ಸಕಲೇಶಪುರ 50 ಹಾಗೂ ಇತರೆ ಜಿಲ್ಲೆಯ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಸನ ತಾಲ್ಲೂಕಿನ 9, ಚನ್ನರಾಯಪಟ್ಟಣ 3, ಆಲೂರು 2, ಅರಕಲಗೂಡು, ಅರಸೀಕೆರೆಯ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.