ಹಾಸನ: ಕನ್ನಡ ಸಾಹಿತ್ಯ ಪರಿಷತ್ ಆಡಳಿತ ಮತ್ತು ಹಣಕಾಸಿನ ವ್ಯವಸ್ಥೆ ಪಾರದರ್ಶಕಗೊಳಿಸುವುದು, ಶಾಲಾ, ಕಾಲೇಜುಗಳಲ್ಲಿ ಸಾಹಿತಿಗಳ ಜನ್ಮ ದಿನ ಆಚರಣೆ,ಹೋಬಳಿಗಳಲ್ಲಿ ಸಾಹಿತ್ಯಭವನ ನಿರ್ಮಾಣ, ಪರಿಷತ್ ನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಗಳನ್ನುನಿಯಂತ್ರಿಸಲು ಕ್ರಮ..

lಅಧಿಕಾರ ಸ್ವೀಕರಿಸಿದ ನಂತರ ಮಾಡುವ ಮೊದಲ ಕೆಲಸ?

ಉ: ಹೋಬಳಿವಾರು ಮತದಾರರ ಸಂಖ್ಯೆ ಹೆಚ್ಚಿಸುವ ಮೂಲಕ ಮತಗಟ್ಟೆಗಳನ್ನು ಸ್ಥಾಪಿಸಿ,ಮುಂದಿನ ಚುನಾವಣೆಯನ್ನು ಸುಸೂತ್ರವಾಗಿ ನಡೆಯುವಂತೆ ಮಾಡುವುದು. ಹೋಬಳಿವಾರುಬರಹಗಾರರ ಮಾಹಿತಿ ಕೋಶ ಸಂಗ್ರಹಿಸಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಾಹಿತಿ, ಮಾಹಿತಿ ಕೋಶಹೊರ ತರಲಾಗುವುದು. ಇದರಿಂದ ಸಮ್ಮೇಳನಾಧ್ಯಕ್ಷರ ಆಯ್ಕೆ ಸುಲಭವಾಗುತ್ತದೆ.ಪರಿಷತ್ ಚಟುವಟಿಕೆ ಗಳನ್ನು ತಳ ಮಟ್ಟದಿಂದ ಆರಂಭಿಸಲು ವೇಳಾಪಟ್ಟಿ ಹಾಕಿಕೊಳ್ಳ ಲಾಗುವುದು.

lಫಲಿತಾಂಶದ ಬಗ್ಗೆ ಏನು ಹೇಳುತ್ತೀರಾ?

ಉ: ಹೆಚ್ಚಿನ ಸಂತೋಷವಾಗಿದೆ. ಚುನಾವಣೆಯಲ್ಲಿ ಗೆಲುತ್ತೇನೆ ಎಂಬ ನಿರೀಕ್ಷೆ ಇತ್ತು. ಸದಸ್ಯರ ಮೇಲೆ ಸಂಪೂರ್ಣ ವಿಶ್ವಾಸ ಇತ್ತು. ಸಾಹಿತಿಗಳು, ಬರಹಗಾರರು ಸೇರಿದಂತೆ ಎಲ್ಲರೂ ಬೆಂಬಲಿಸಿದ್ದಾರೆ.

ಪ್ರ: ಸಾಹಿತ್ಯ ಸಮ್ಮೇಳನವನ್ನು ಜನೋಪಯೋಗಿಯಾಗಿ ಹೇಗೆ ಪರಿವರ್ತಿಸುತ್ತೀರಿ?

ಉ: ಪ್ರಚಲಿತ ವಿದ್ಯಮಾನಗಳ ಕುರಿತು ಗಂಭೀರವಾದ ವ್ಯಕ್ತಿಯಿಂದ ಚರ್ಚೆ ಮಾಡಿಸಿ, ಸಂವಾದ ಏರ್ಪಡಿಸಿ ದಾಗ ಸಮಾಜಮುಖಿಯಾಗುತ್ತದೆ. ಸಾಮಾಜಿಕ ಮೌಲ್ಯಗಳು, ಪ್ರಾಕೃತಿಕ ಸಮಸ್ಯೆಗಳನ್ನು ಒಳಗೊಂಡು ಪ್ರಚಲಿತ ವಿದ್ಯಮಾನ ಚರ್ಚಿಸಬೇಕು.

lಚುನಾವಣೆಗೂ ಮುನ್ನ ನೀಡಿದ ಭರವಸೆಗಳು?

ಉ: ಹಂತ ಹಂತವಾಗಿ ಭರವಸೆಗಳನ್ನು ಈಡೇರಿಸಲಾಗುವುದು. ಹೋಬಳಿವಾರು ಸಾಹಿತ್ಯ ಭವನ ನಿರ್ಮಾಣ ಮಾಡಲಾಗುವುದು. ಸಾಹಿತ್ಯ ಸಿರಿ ಸಂಚಿಕೆ ಆರಂಭಿಸಿ,ಜಿಲ್ಲೆಯ ಸಂಶೋಧಕರು, ಬರಹಗಾರರ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲಾಗುವುದು.ಆರಂಭದಲ್ಲಿ ತ್ರೈಮಾಸಿಕ, ನಂತರ ಮಾಸಿಕ ಹೊರ ತರಲಾಗುವುದು.

ಪ್ರ: ಹಿಂದಿನ ಅವಧಿಯಲ್ಲಿ ಪರಿಷತ್ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ಏನು ಹೇಳುತ್ತೀರಾ?

ಉ: ಈ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪರಿಷತ್ ದಾಖಲಾತಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು.

lಆಡಳಿತದಲ್ಲಿ ಪಾರದರ್ಶಕತೆ ತರಬೇಕೆಂಬ ಒತ್ತಾಯ ಇದೆಯೆಲ್ಲಾ?

ಉ: ಮೊದಲು ಆರ್ಥಿಕ ಪಾರದರ್ಶಕತೆ ತರಲಾಗುವುದು. ಅಧಿಕೃತ ರಸೀದಿ ಇಲ್ಲದೆಯಾರೂ ಪರಿಷತ್ ಹೆಸರಿನಲ್ಲಿ ಚಂದಾ ಎತ್ತಲು ಅವಕಾಶ ಇಲ್ಲ. ಪರಿಷತ್ ಕಟ್ಟಡಗಳಿಂದ ಬರುವ ಬಾಡಿಗೆಗಳನ್ನು ಬ್ಯಾಂಕ್ನ ಮೂಲಕ ವ್ಯವಹರಿಸಲಾಗುವುದು. ಸಮ್ಮೇಳನ ಸಂದರ್ಭದಲ್ಲಿ ಕೇಂದ್ರದ ಅನುದಾನ ಸಾಕಾಗದಿದ್ದರೆ ನಗರಸಭೆ, ಜಿಲ್ಲಾ ಪಂಚಾಯಿತಿ,ಡಿಸಿಸಿ ಬ್ಯಾಂಕ್ ನೀಡಲಿದೆ. ಇದರಲ್ಲಿ ಉತ್ತಮವಾಗಿ ಸಮ್ಮೇಳನ ನಡೆಸಬಹುದು. ಸಾರ್ವಜನಿಕರ
ವಂತಿಕೆ ಸಂಗ್ರಹಿಸುವುದಿಲ್ಲ.

ಪರಿಷತ್ ವಾರ್ಷಿಕ ನಿರ್ವಹಣಾ ವೆಚ್ಚ ₹75 ಸಾವಿರ ದೊರೆಯಲಿದೆ.ಆದರೆ, ಪರಿಷತ್ ನಿಯಮಿತ ಚಟುವಟಿಕೆಗಳಿಗೆ ಇದು ಸಾಲವುದಿಲ್ಲ. ಹಾಗಾಗಿ ದಾನಿಗಳಪ್ರಾಯೋಜಕತ್ವ ಪಡೆಯಲಾಗುವುದು. ಹಣ ನೀಡಿದರೆ ರಸೀದಿ ಸಮೇತ ಲೆಕ್ಕ ನೀಡಲಾಗುವುದು.

lಯುವಜನರನ್ನು ಸೆಳೆಯುವಲ್ಲಿ ಏನಾದರೂ ಕಾರ್ಯಕ್ರಮ ರೂಪಿಸಿದ್ದೀರಾ?

ಉ: ಪೋಷಕರು ಮಕ್ಕಳಿಗೆ ಅವರ ಆಸಕ್ತಿ ವಿಷಯದ ಪುಸ್ತಕ ಕೊಡಬೇಕು. ಅವರಿಗೆಸದಭಿರುಚಿ ಪುಸ್ತಕಗಳ ಬಗ್ಗೆ ಮಾಹಿತಿ ನೀಡಬೇಕು.ಬರವಣಿಗೆ ರೂಢಿಸಿಕೊಂಡ ಮಕ್ಕಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡುತ್ತೇನೆ. ಶಾಲಾ, ಕಾಲೇಜುಗಳಲ್ಲಿ ಪರಿಷತ್ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವುದು. ಆಧುನಿಕ
ಕನ್ನಡ ಸಾಹಿತ್ಯ ಸಾಹಿತಿಗಳ ಜನ್ಮ ಜಯಂತಿ ಆಚರಣೆ, ಕನ್ನಡ ಭಾಷೆಯ ವೈಶಿಷ್ಟ್ಯತೆ ತಿಳಿಸಿಕೊಡುವ ಕಾರ್ಯಕ್ರಮವನ್ನು ವರ್ಷವಿಡೀ ಆಯೋಜಿಸುವುದು.

lಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಉ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸಲು ಆರಂಭಿಸಿದರೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಇಂಗ್ಲಿಷ್ ಕಲಿಸುತ್ತಾರೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲೂ ವೈಜ್ಞಾನಿಕವಾಗಿ ಇಂಗ್ಲಿಷ್ ಭಾಷೆ ಕಲಿಸುವಂತಾಗಬೇಕು.

lಒಂದು ಪಕ್ಷದ ವ್ಯಕ್ತಿಯಾಗಿ ಗುರುತಿಸಿಕೊಂಡು ಮತಗಳನ್ನು ಗಿಟ್ಟಿಸಿಕೊಂಡಿದ್ದೀರಿ ಎಂಬ
ಆರೋಪಗಳಿವೆಯಲ್ಲ?

ಉ: ಯಾವ ಪಕ್ಷದ ಜತೆಯೂ ಗುರುತಿಸಿಕೊಂಡಿಲ್ಲ. ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದಾರೆ.

lಅಧ್ಯಕ್ಷ ಹುದ್ದೆಗೆ ಯಾಕಿಷ್ಟು ಪೈಪೋಟಿ?

ಉ: ಆರ್ಥಿಕ ಸಂಪನ್ಮೂಲವಿದೆ ಎನ್ನುವ ಕಾರಣಕ್ಕೆ ಪೈಪೋಟಿ ಇರಬಹುದು ಅಂದುಕೊಂಡಿದ್ದೇನೆ. ಹಿಂದೆಯೆಲ್ಲಾ ಸರ್ಕಾರದ ಅನುದಾನ ಬರುತ್ತಿರಲಿಲ್ಲ. ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುವ ವ್ಯವಧಾನವೂ ಇರಲಿಲ್ಲ. ಆಗ ಪರಿಷತ್ ನಡೆಸುವುದು ಹೊಣೆಗಾರಿಕೆ ಅಂದುಕೊಂಡಿದ್ದರು.

lಕೊನೆಯದಾಗಿ ಏನು ಹೇಳುತ್ತೀರಿ?

ಉ: ನನ್ನ ಕನಸಿನ ಪರಿಷತ್ ಕಟ್ಟಲು ಪ್ರಯತ್ನಿಸುತ್ತೇನೆ. ಮಾದರಿ ಪರಿಷತ್ ಆಗಿ ರೂಪಿಸಿರುವುದನ್ನು ಹೊರ ಜಿಲ್ಲೆಯವರು ಮೆಚ್ಚಿಕೊಂಡರೆ ರಾಜ್ಯ ಪರಿಷತ್ಗೆ ಸ್ಪರ್ಧಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.