ಹಿರೀಸಾವೆ: ‘ದೇವಸ್ಥಾನವನ್ನು ನಿರ್ಮಾಣ ಮಾಡಿದ ನಂತರ ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳವುದು ಬಹಳ ಮುಖ್ಯ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಹೋಬಳಿಯ ಬಿಳಿಕೆರೆ ಗ್ರಾಮದಲ್ಲಿ ಹೇಳಿದರು.

ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಮಾರಮ್ಮ ದೇವಾಲಯದ ಲೋಕಾರ್ಪಣೆಯಲ್ಲಿ ಭಾಗವಹಿಸಿ ಮಾತನಾಡಿದರು. ‘ದೇವರ ಅನುಗ್ರಹವಿಲ್ಲದೆ ಈ ಭೂಮಂಡಲದಲ್ಲಿ ಏನೂ ನಡೆಯುವುದಿಲ್ಲ. ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ದೇವರ ಸನ್ನಿಧಿಯಲ್ಲಿ ಸಿಗುತ್ತದೆ. ನಾನು ಎನ್ನುವುದಕ್ಕಿಂತ ನಾವು ಎನ್ನುವ ಮೂಲಕ ಗ್ರಾಮದ ಅಭಿವದ್ಧಿ ಮಾಡಬೇಕು’ ಎಂದರು.

‘ಈ ಗ್ರಾಮದಿಂದ ಕಬ್ಬಳಿ ಗ್ರಾಮದವರಗೆ 2 ಕಿಲೋಮೀಟರ್ ರಸ್ತೆಯನ್ನು ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ತೋಟಿಕೆರೆ ಏತನೀರಾವರಿ ಯೋಜನೆಯು ಪ್ರಗತಿಯಲ್ಲಿದ್ದು, ಮುಂದಿನ ಹಂಗಾಮಿನಿಂದ ಕೆರೆಗಳಿಗೆ ನೀರು ಹರಿಸಲಾಗುವುದು. ದಿಡಗ-ಕಬ್ಬಳಿ ಏತನೀರಾವರಿ ಯೋಜನೆಯೂ ಪ್ರಸ್ತಾವನೆಯ ಹಂತದಲ್ಲಿದೆ’ ಎಂದರು.

ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ರತ್ನ ಕುಮಾರಸ್ವಾಮಿ, ಮುಖಂಡರಾದ ಎಂ.ಆರ್.ವಾಸು, ಶಿವನಂಜೇಗೌಡ, ಬಿಳಿಕೆರೆ ರಂಗೇಗೌಡ, ರಾಜೇಗೌಡ, ಪೃಥ್ವಿಕುಮಾರ್, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.