ಶುಕ್ರವಾರ, ಜನವರಿ 27, 2023
26 °C

ಅವರು ಪವಿತ್ರ ಸರ್ಕಾರವನ್ನು ಹೇಗೆ ನಡೆಸುತ್ತಾರೆ ನೋಡೋಣ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಮ್ಮದು ಪಾಪದ ಸರ್ಕಾರ ಇತ್ತು, ಈಗ ಪವಿತ್ರ ಸರ್ಕಾರ ಬಂದಿದೆ, ಅವರು ಹೇಗೆ ನಡೆಸುತ್ತಾರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ತಿಳಿಸಿದರು.

ಚಿಕ್ಕಮಗಳೂರಿನಿಂದ ಕೆ.ಆರ.ಪೇಟೆಗೆ ಹೋಗುವ ಮಾರ್ಗ ಮಧ್ಯದ ಹಾಸನದ ಪ್ರವಾಸಿ ಮಂದಿರಕ್ಕೆ ಬಂದಿದ್ದ ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಾನು ಈಗ ಏನು ಮಾತನಾಡುವುದಿಲ್ಲ, ಜನರು ತೀರ್ಮಾನ ಕೈಗೊಳ್ಳುತ್ತಾರೆ., ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಕುಮಾರಸ್ವಾಮಿ‌ ಹೇಳಿದರು.

ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ ದಯವಿಟ್ಟು ನನ್ನ ಹಾಗೂ ಕುಟುಂಬವನ್ನು ನೆಮ್ಮದಿ ಯಾಗಿ ಇರಲು ಬಿಟ್ಟು ಬಿಡಿ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿ ನಿಖಿಲ್, ಪ್ರಜ್ವಲ್ ಸ್ಪರ್ಧೆ ವಿಚಾರ ಕಪೋಲ ಕಲ್ಪಿತವಾಗಿದೆ. ಅಧಿಕಾರಕ್ಕೆ ಅಂಟಿ ಕೂರುವ ಜಾಯಮಾನ ನನ್ನದಲ್ಲ ಎಂದರು. 

ನೂತನ ಸರ್ಕಾರ ಬಂದು ಒಂದು ವಾರ ಆಗಿದೆ. ಈಗ ಏನೆನು ನಡೀತಿದೆ ಅನ್ನೋದು ನನಗೆ ಗೊತ್ತು ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು