ಹೊಳೆನರಸೀಪುರ: ‘ಸರ್ಕಾರ ರೈತರು ಬೆಳೆದ ಭತ್ತ, ರಾಗಿ, ಬಿಳಿ ಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿದ್ದು, ಹೊಳೆನರಸೀಪುರ ತಾಲೂಕಿನಲ್ಲಿಯೂ ರಾಗಿ ಖರೀದಿ ಆರಂಭಿಸಲಾಗಿದೆ’ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಬೆಂಬಲಬೆಲೆ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ,‘ಹೊಳೆನರಸೀಪುರದಲ್ಲಿ 2050 ಮಂದಿ ಮತ್ತು ಹಳ್ಳಿಮೈಸೂರು ಹೋಬಳಿಯಲ್ಲಿ 1861 ಮಂದಿ ರೈತರು ಬೆಂಬಲಬೆಲೆಯಲ್ಲಿ ರಾಗಿ ನೀಡಲು ಈಗಾಗಲೇ ತಮ್ಮ ಹೆಸರು ನೊಂದಾಯಿಸಿದ್ದಾರೆ. ಹೊಳೆನರಸೀಪುರದಲ್ಲಿ 32471 ಕ್ವಿಂಟಾಲ್, ಹಾಗು ಹಳ್ಳಿಮೈಸೂರಿನಲ್ಲಿ 29025 ಕ್ಷಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಮೂಲಕ ಖರೀದಿಗೆ ಸಿದ್ದತೆ ಮಾಡಿಕೊಂಡಿದ್ದಾರೆ. ₹4290 ಬೆಲೆಯಲ್ಲಿ ರಾಗಿ ಖರೀದಿಸಲಾಗುತ್ತಿದ್ದು ಈ ಬೆಲೆಗೆ ನೀಡಿ ಅವಕಾಶ ಸದುಪಯೋಗ ಮಾಡಿಕೊಳ್ಳಿ’ ಎಂದರು.

ರಾಗಿ ಖರೀದಿ ಕೇಂದ್ರದ ಅಧಿಕಾರಿ ಶಮೀದ್ ಆಲಿ, ‘ರೈತರು ಬೆಳೆದು ನೋಂದಣಿ ಮಾಡಿಕೊಂಡಿರುವ ಪ್ರಕಾರ ಪ್ರತೀ ರೈತರಿಂದ ಕನಿಷ್ಟ 10 ಕ್ವಿಂಟಾಲ್ ರಾಗಿ, ಗರಿಷ್ಟ 20 ಕ್ವಿಂಟಾಲ್ ರಾಗಿ ಬೆಂಬಲ ಬೆಲೆಯಲ್ಲಿ ನೀಡಲು ಅವಕಾಶ ಇದೆ. ಪ್ರತಿ ಚೀಲದ ರಾಗಿಯ ಗುಣಮಟ್ಟ ನೋಡಿದ ನಂತರ ರೈತರು ತಂದಿರುವ ರಾಗಿ ಚೀಲಗಳಿಂದ ನಮ್ಮ ಇಲಾಖೆಗೆ ಸೇರಿದ ಚೀಲಕ್ಕೆ ತುಂಬಿಸಿ ಗುಣಮಟ್ಟದ ರಾಗಿ ಮಾತ್ರ ಖರೀದಿ ಮಾಡಲಾಗುವುದು’ ಎಂದು ತಿಳಿಸಿದರು.

‘ರೈತರಿಂದ ಖರೀದಿಸಿದ ರಾಗಿಯ ಹಣವನ್ನು ನೇರವಾಗಿ ರೈತರ ಬ್ಯಾಂಕಿನ ಖಾತೆಗಳಿಗೆ ಹಾಕಲಾಗುವುದು’ಎಂದರು. ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಸೋಮಶೇಖರ್, ತಾಲ್ಲೂಕು ಕಚೇರಿಯ ಆಹಾರ ಇಲಾಖೆಯ ಸಿಬ್ಬಂದಿ, ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.