ಹಾಸನ: ಜಿಎಸ್‌ಎಸ್ ಎಂದೇ ಖ್ಯಾತಿ ಪಡೆದ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾಹಿತ್ಯದ ಪ್ರಬುದ್ಧ ವಿಮರ್ಶಕರು. ಗೋವಿಂದ ಪೈ, ಕುವೆಂಪು ನಂತರ 2006ರಲ್ಲಿ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದವರು. ಸಮನ್ವಯದ ಕವಿ ಎಂದೇ ಗುರುತಿಸಲಾಗುವ ಶಿವರುದ್ರಪ್ಪನವರ ಕಾವ್ಯದಲ್ಲಿ ಬದುಕು ಮತ್ತು ಚಿಂತನೆಗಳು ಅನಾವರಣಗೊಂಡಿವೆ ಎಂದು ಶಿಕ್ಷಕಿ, ಕಲಾವಿದೆ ರಾಣಿ ಚರಾಶ್ರೀ ತಿಳಿಸಿದರು.

ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪ ಪಕ್ಕದ ಗಣಪತಿ ದೇವಸ್ಥಾನ ಆವರಣದಲ್ಲಿ ಹಾಸನಾಂಬ ವೇದಿಕೆ ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್ ಅವರ ಪ್ರಾಯೋಜನೆಯಲ್ಲಿ ನಡೆದ ಮನೆ ಮನೆ ಕವಿಗೋಷ್ಠಿಯ 315ನೇ ತಿಂಗಳ ಕಾರ್ಯಕ್ರಮದಲ್ಲಿ ಜಿಎಸ್‌ಎಸ್ ಕಾವ್ಯ ಕುರಿತಂತೆ ಮಾತನಾಡಿದರು.

ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎಂಬ ಕವಿತೆಯ ಸಾಲು ಇಂದಿಗೂ ಮನನೀಯ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಎಲ್ಲಿದೆ ನಂದನ ಎಲ್ಲಿದೆ ಬಂಧನ ಮೊದಲಾದ ಕವಿತೆಗಳ ಸಾಲುಗಳು ಅರ್ಥಗರ್ಭಿತವಾಗಿವೆ ಎಂದರು. ಜಿ.ಎಸ್.ಎಸ್. ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಳ್ಳಾರಿಯಲ್ಲಿ 1988ರಲ್ಲಿ ನಡೆದ 10 ದಿನಗಳ ಕಥಾ ಕಮ್ಮಟದಲ್ಲಿ ಭಾಗವಹಿಸಿ ನಾಡಿನ ಶ್ರೇಷ್ಠ ಕವಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದರು.

ಕವಿ ಜೆ.ಆರ್.ರವಿಕುಮಾರ್ ಮಾತನಾಡಿ, ಕವಿಯ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಕವಿತೆಯ ಸಾಲು ಉಲ್ಲೇಖಿಸಿ ಎತ್ತಿದ ಪ್ರಶ್ನೆ ಸ್ವಾರಸ್ಯಕರ ಚರ್ಚೆಗೆ ಒಳಪಟ್ಟಿತು.

ಧನಲಕ್ಷ್ಮಿ ಗೊರೂರು, ದಿಬ್ಬೂರು ರಮೇಶ್, ಬಾಲಕೃಷ್ಣ ಎಚ್.ಎನ್., ಪದ್ಮಾವತಿ ವೆಂಕಟೇಶ್, ರಾಣಿ ಚರಾಶ್ರಿ ಅವರು ಜಿ.ಎಸ್.ಎಸ್. ಅವರ ಭಾವಗೀತೆಗಳನ್ನು ಹಾಡಿದರು. ಕೆ.ಎನ್.ಚಿದಾನಂದ ಜಿ.ಎಸ್.ಎಸ್.ಅವರ ಕವಿತೆ ವಾಚಿಸಿದರು.

ಕವಿಗೋಷ್ಠಿಯಲ್ಲಿ ನೀಲಾವತಿ ಸಿ.ಎನ್., ಜೆ.ಆರ್.ರವಿಕುಮಾರ್, ಎನ್.ಎಲ್.ಚನ್ನೇಗೌಡ, ಗ್ಯಾರಂಟಿ ರಾಮಣ್ಣ, ಮಲ್ಲೇಶ್ ಜಿ., ಗೊರೂರು ಅನಂತರಾಜು, ದಿಬ್ಬೂರು ರಮೇಶ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಎ.ವಿ.ರುದ್ರಪ್ಪಾಜಿರಾವ್, ಜಯದೇವಪ್ಪ, ಜಯಲಕ್ಷ್ಮಿ, ಹರಿಣಿ, ಮೀನಾಕ್ಷಿ, ಯಾಕೂಬ್, ಕಮಲಾಕ್ಷಿ ಬಿ.ಜಿ., ಎಚ್.ವಿ. ಚಂದ್ರಣ್ಣಗೌಡ, ಎಲ್.ಎಸ್. ನಿರ್ಮಲಾ ಇದ್ದರು.

ಕವಿ ಸಮುದ್ರವಳ್ಳಿ ವಾಸು ಸ್ವಾಗತಿಸಿದರು. ರಾಣಿ ಮೇಡಂ ತಂಡದವರು ಸಮೂಹ ಗೀತೆಗಳಿಂದ ರಂಜಿಸಿದರು. ಕಲಾ ಸೇವೆಗಾಗಿ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಣಿ ಚರಾಶ್ರೀ ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.