ಅರಸೀಕೆರೆ: ‘ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ. ವಿಜ್ಞಾನ ಲೋಕದಲ್ಲಿ ಆಗಿರುವ, ಆಗುತ್ತಿರುವ ಆವಿಷ್ಕಾರಗಳೆ ಮುಂದಿನ ದಿನಗಳಲ್ಲಿ ಮನುಕುಲದ ಅವನತಿಗೆ ಕಾರಣ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಾಡಳು ಗ್ರಾಮದ ಮೂಲ ಸ್ವರ್ಣ ಗೌರಿ ಅಮ್ಮನ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕೋಡಿಮಠದ ಲಿಂಗೈಕ್ಯ ನೀಲಲೋಚನ ಸ್ವಾಮೀಜಿಯ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದರು.

‘ಭೂಮಿಯ ಮೇಲೆ ಅಧರ್ಮ ಹೆಚ್ಚಾದಗಲೆಲ್ಲ ದಶಾವತಾರದ ಮೂಲಕ ಭಗವಂತ ಧರೆಯನ್ನು ಉದ್ಧರಿಸಿದ್ದನ್ನು ನಾವು ನಮ್ಮ ಪುರಾಣದ ಮೂಲಕ ತಿಳಿದುಕೊಂಡಿದ್ದೇವೆ. ಅದೇ ರೀತಿ ಕಲಿಯುಗದಲ್ಲಿ ಭಗವಂತ ಕಲ್ಲಾಗಿ ಇದ್ದರು ವಿಜ್ಞಾನಿಗಳ ಮೂಲಕ ಕ್ಷಣಮಾತ್ರದಲ್ಲಿ ಲಕ್ಷಾಂತರ ಮಂದಿಯನ್ನು ಕೊಲ್ಲುವಂತಹ ಅಣುಬಾಂಬ್ಗಳನ್ನು ಭಗವಂತನೇ ಸಿದ್ಧಪಡಿಸಿಟ್ಟಿರುವಂತೆ ಕಾಣುತ್ತದೆ. ಮನುಕುಲ ಈ ದುಷ್ಪತ್ತಿನಿಂದ ತಪ್ಪಿಸಿಕೊಳ್ಳಬೇಕಾದರೆ ಮಹಾತಪಸ್ವಿಗಳಾದಂತ ಕೋಡಿಮಠದಂತ ಶ್ರೀಗಳ ಹಿತವಚನವನ್ನು ಆಲಿಸಿ ಸನ್ಮಾರ್ಗದಲ್ಲಿ ಸಾಗದೇ ಇದ್ದರೆ ಮನುಕುಲ ಮನುಷ್ಯನಿಂದಲೇ ಅವನತಿ ಆಗಲಿದೆ ಎಂದು ಎಚ್ಚರಿಸಿದರು.

ಮೂಲ ಸ್ವರ್ಣ ಗೌರಿ ಅಮ್ಮನವರ ದ್ವಾರ ಬಾಗಿಲು ನಿರ್ಮಾಣಕ್ಕೆ ₹10 ಲಕ್ಷ ನೀಡಿದ್ದೆನೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ಇನ್ನಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ಲಿಂಗ ನಿಷ್ಠರಾಗಿದ್ದ ನೀಲಲೋಚನ ಸ್ವಾಮೀಜಿ ಮಹಾ ತಪಸ್ವಿಗಳಾಗಿದ್ದರು. ಈ ಭಾಗದ ಭಕ್ತರಿಗೆ ದಾರಿದೀಪವಾಗಿದ್ದರು. ದೈಹಿಕವಾಗಿ ನೀಲಲೋಚನ ಶ್ರೀಗಳು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮಹಿಮೆ ಭಕ್ತರನ್ನು ಇಂದಿಗೂ ಉದ್ಧರಿಸುತ್ತಾ ಇದೆ ಎಂದರು.

ಶಿವಲಿಂಗಜ್ಜಯ್ಯನವರು ಕೋಟಿ ಜಪದ ಮೂಲಕ ಸಿದ್ಧಿಸಿ ಕೊಟ್ಟಿರುವ ಮೂಲ ಸ್ವರ್ಣ ಗೌರಿ ಅಮ್ಮನವರಿಗೆ ತೊಡಿಸುವ ಮೂಗುತಿ ಹಾಗೂ ಪ್ರಸ್ತುತ ಕೋಡಿಮಠದ ಜಗದ್ಗುರುಗಳಾದ ಡಾ, ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಅನುಗ್ರಹದಿಂದ ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಉತ್ತುಂಗಕ್ಕೆ ಏರುವುದಷ್ಟೇ ಅಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಕ್ಷೇತ್ರವಾಗಿ ಬೆಳಗಲಿದೆ ಎಂದರು.

ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ ಮಾತನಾಡಿದರು.

ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು, ಹಾನಗಲ್ ವಿರಕ್ತಮಠದ ಶಿವಯೋಗಿಸ್ವರ ಸ್ವಾಮೀಜಿ, ಹಿರೇಮಠದ ಮೃತ್ಯುಂಜಯ ಸ್ವಾಮೀಜಿ, ಮಾತಾಡು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕಡೂರು ಮೂರು ಕಳಸ ಮಠದ ಜ್ಞಾನಪ್ರಭು ದೇಶಿ ಕೇಂದ್ರ ಸ್ವಾಮೀಜಿ.ಕೊಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು.

ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಶಿಧರ್, ವೈದ್ಯರಾದ ಶಿವಕುಮಾರ್, ಕೋಡಿಮಠದ ಪ್ರತಿನಿಧಿ ಮಾದೇವಪ್ಪ, ಮೂಲ ಸ್ವರ್ಣ ಗೌರಿ ಅಮ್ಮನವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಮುಖಂಡರಾದ ಮಾಡಳು ಶಿವಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.