ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೆ ತರುವುದಾಗಿ ನಿರೀಕ್ಷಿಸಿದ್ದ ನೌಕರರಿಗೆ ಇದರಿಂದ ನಿರಾಶೆಯಾಗಿದೆ. ಮೂರನೇ ಭಾರಿಗೆ ಸಮಿತಿ ರಚಿಸುವ ಮೂಲಕ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ತಾಲ್ಲೂಕು ಎನ್‍ಪಿಎಸ್ ನೌಕರಸಂಘದ ಅಧ್ಯಕ್ಷ ಕೆ.ಆರ್. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.