ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್ ಆನ್‌ ವ್ಹೀಲ್ಸ್ ಸೇವೆ

ಸೋಂಕಿತರಿಗೆ ನೆರವಿಗೆ ನಿಂತ ಐಎಲ್‌ಎಫ್‌, ವೈದ್ಯಕೀಯ ಕ್ಷೇತ್ರಕ್ಕೆ ತಕ್ಕಂತೆ ಬಸ್ ವಿನ್ಯಾಸ
Last Updated 30 ಮೇ 2021, 14:56 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕಿತರಿಗೆ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ಐಎಲ್‍ಎಫ್ (ಇಂಟರ್‌ ನ್ಯಾಷನಲ್
ಲಿಂಗಾಯತ ಫೋರಂ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸಿದೆ.

ಐಎಲ್‍ಎಫ್ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ಸಾರಿಗೆ ಸಂಸ್ಥೆ ಬಸ್‍ಗೆ 2 ವೈದ್ಯಕೀಯ ಆಮ್ಲಜನಕ ಸಿಲಿಂಡರ್,
ರೋಗಿಗೆ ಅಳವಡಿಸಲು ಬೇಕಾಗುವ ವೈದ್ಯಕೀಯ ಉಪಕರಣ, ಸೀಟಿನ ವ್ಯವಸ್ಥೆ ಮಾಡಿಕೊಟ್ಟಿದೆ. ಬೇಲೂರು ಪಟ್ಟಣದಲ್ಲಿ
ಆಕ್ಸಿಜನ್ ಆನ್ ವ್ಹೀಲ್ಸ್‍ಗೆ ಸೋಮವಾರ ಚಾಲನೆ ಸಿಗಲಿದೆ.

ಈ ಬಸ್‍ನಲ್ಲಿ ಆರು ರೋಗಿಗಳನ್ನು ಆಸ್ಪತ್ರೆಗೆ ಕರೆತರಬಹುದಾಗಿದೆ. ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ
ನರ್ಸ್‍ಗಳು ಆಕ್ಸಿಜನ್ ಅಳವಡಿಸಲಿದ್ದಾರೆ. ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಸೇವೆ ಪ್ರಾರಂಭಿಸಲಾಗಿದ್ದು
ಆಸ್ಪತ್ರೆ ಸೇರುವ ವರೆಗೆ ರೋಗಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿಗಾ ವಹಿಸಲಾಗಿದೆ. ಒಂದು
ವೇಳೆ ನಿಗದಿತ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆಯಿದ್ದರೆ ಬಸ್‍ನಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಕೆಎಸ್‍ಆರ್‌ಟಿಸಿ ಹಾಸನ ವಿಭಾಗದಿಂದ ನಾಲ್ಕು ಬಸ್‍ಗಳನ್ನು ಕೋವಿಡ್ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. ಎರಡು
ಹಾಸನ, 1 ಬಸ್ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದೆ.
4ನೇ ಬಸ್ ಆಕ್ಸಿಜನ್ ಆನ್ ವ್ಹೀಲ್ಸ್ ಕಾರ್ಯ ನಿರ್ವಹಿಸಲಿದೆ.

ಬಸ್‌ನಲ್ಲೇ ಆಮ್ಲಜನಕ ಸಿಗುವುದರಿಂದ ಉಸಿರಾಟದ ಸಮಸ್ಯೆ ಇರುವವರು ಆಂಬುಲೆನ್ಸ್‌ಗಾಗಿ ಕಾಯುವ ಅವಶ್ಯಕತೆ ಇಲ್ಲ. ದೂರದ ಊರುಗಳಿಂದ ಆಮ್ಲಜನಕ ಸಹಾಯದಿಂದ ಈ ಬಸ್‌ಗಳಲ್ಲಿ ಆಸ್ಪತ್ರೆ ಬರಬಹುದಾಗಿದೆ.

ಐಎಲ್‍ಎಫ್ ಸಂಸ್ಥೆ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸುವುದಾಗಿ ಪ್ರಸ್ತಾಪ ಸಲ್ಲಿಸಿದಾಗ ಮೇಲಧಿಕಾರಿಗಳ ಅನುಮತಿ ಪಡೆದು ಬಸ್ ವಿನ್ಯಾಸ ಮಾಡಲಾಗಿದೆ. ನಾಲ್ಕು ಬಸ್‍ಗಳನ್ನು ಕೋವಿಡ್ ಕಾರ್ಯಕ್ಕೆ ನೀಡಲಾಗಿದೆ ಎಂದುಕೆಎಸ್‍ಆರ್‌ಟಿಸಿ ವಿಭಾಗಿಯ ತಾಂತ್ರಿಕ ಅಧಿಕಾರಿಕೆ. ನಂದಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT