ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ‘ಬಡ್ಡಿ ಮನ್ನಾ ಯೋಜನೆ ಲಾಭ ಪಡೆಯಿರಿ’

ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಸಾಮಾನ್ಯ ಸಭೆ
Published 7 ಫೆಬ್ರುವರಿ 2024, 14:36 IST
Last Updated 7 ಫೆಬ್ರುವರಿ 2024, 14:36 IST
ಅಕ್ಷರ ಗಾತ್ರ

ಅರಕಲಗೂಡು: ರಾಜ್ಯ ಸರ್ಕಾರ ಘೋಷಿಸಿರುವ ಸಹಕಾರಿ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ರೈತರು ಪಡೆದ ಮಧ್ಯಮಾವಧಿ ಮತ್ತು ಧೀರ್ಘಾವದಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆಯ ಲಾಭವನ್ನು ರೈತರು ಪಡೆದು ಕೊಳ್ಳುವಂತೆ ಶಾಸಕ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಮಂಜು ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕಿನಲ್ಲಿ 498 ಜನರು ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದು, ಇವರು ಪಾವತಿಸ ಬೇಕಿರುವ ಸಾಲದ ಒಟ್ಟು ಮೊತ್ತ ₹ 9.02 ಕೋಟಿ. ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದಲ್ಲಿ ₹4.80 ಕೋಟಿ ಬಡ್ಡಿ ಮನ್ನಾ ಪ್ರಯೋಜನ ದೊರೆಯಲಿದೆ. ಫೆ.29 ಬಡ್ಡಿ ಮನ್ನಾ ಯೋಜನೆಯಡಿ ಸಾಲ ಮರುಪಾವತಿಗೆ ಕೊನೆಯ ದಿನವಾಗಿದೆ. ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ ರೈತರಿಗೆ ಆದ್ಯತೆ ಮೇಲೆ ಬ್ಯಾಂಕ್ ಮರು ಸಾಲ ಮಂಜೂರು ಮಾಡಲಿದೆ, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಡ್ಡಿ ಮನ್ನಾ ಯೋಜನೆಯ ಲಾಭಪಡೆಯಲು ಸಾಲ ಮರುಪಾವತಿಗೆ ಮುಂದಾದ ಮಾದಾಪುರ ಗ್ರಾಮದ ಶೇಖರ್, ಚಿಕ್ಕಮಗ್ಗೆ ಗ್ರಾಮದ ರಮೇಶ್, ಯಗಟಿ ಗ್ರಾಮದ ಪ್ರೇಮಾ ಸತೀಶ್ ಅವರನ್ನು ಶಾಸಕ ಮಂಜು ಅಭಿನಂದಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಕೀರ್ತಿರಾಜ್, ಆಡಳಿತ ಮಂಡಳಿ ನಿರ್ದೇಶಕರು, ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್, ಕೇಂದ್ರ ಬ್ಯಾಂಕಿನ ಅಧಿಕಾರಿ ಚಿಕ್ಕಸಿದ್ದೇಗೌಡ, ಬ್ಯಾಂಕ್ ವ್ಯವಸ್ಥಾಪಕಿ ರೇವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT