7
1

ಪೊಲೀಸ್‌ ವಸತಿಗೃಹಗಳ ಕಾಮಗಾರಿ ಪರಿಶೀಲನೆ

Published:
Updated:
ಅರಸೀಕೆರೆಯಲ್ಲಿ ಪೊಲೀಸ್‌ ಇಲಾಖೆ ವಸತಿಗೃಹಗಳ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರ್‌ವಾಡ್‌ ಪರಿಶೀಲಿಸಿದರು

ಅರಸೀಕೆರೆ: ‘ಪೊಲೀಸ್‌ ಸಿಬ್ಬಂದಿಯ ಹಿತ ರಕ್ಷಣೆಗೆ ಇಲಾಖೆ ಬದ್ಧವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರ್‌ ವಾಡ್‌ ತಿಳಿಸಿದರು.

ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಪೊಲೀಸ್‌ ಗೃಹ ನಿರ್ಮಾಣ ಯೋಜನೆಯಡಿ ನಿರ್ಮಾಣ ಆಗುತ್ತಿರುವ ಪೊಲೀಸ್‌ ವಸತಿ ಗೃಹಗಳ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶಾಂತಿ ನೆಲೆಸಲು ಒತ್ತು ನೀಡುವ ಸಿಬ್ಬಂದಿ ಮತ್ತು ಬಿಡುವಿನ ಸಮಯದಲ್ಲಿ ಕುಟುಂಬದ ಜತೆ ನೆಮ್ಮದಿಯಿಂದ ಇರಬೇಕು. ವಸತಿಗೃಹಗಳು ಅಂಥ ವಾತಾವರಣ ನೀಡಲಿವೆ ಎಂದು ಅಭಿಪ್ರಾಯಪಟ್ಟರು. ನೆಲ ಅಂತಸ್ತು ಸೇರಿ ನಾಲ್ಕು ಅಂತಸ್ತುಗಳಲ್ಲಿ ವಸತಿಗೃಹ ನಿರ್ಮಾಣವಾಗುತ್ತಿದೆ. ಅಂದಾಜು ವೆಚ್ಚ ₹ 6.41 ಲಕ್ಷ. 36 ಪೊಲೀಸ್‌ ವಸತಿಗೃಹಗಳಿವೆ ಎಂದು ತಿಳಿಸಿದರು.

ದುರಸ್ತಿಗೆ ಕ್ರಮ: ಮಾರುತಿನಗರ ಬಡಾವಣೆಯಲ್ಲಿ ವಸತಿ ಗೃಹಗಳು ಸೇರಿದಂತೆ ಜಿಲ್ಲಾ ವ್ಯಾಪ್ತಿಗೆ ಬರುವ ಪೊಲೀಸ್‌ ವಸತಿ ಗೃಹಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್‌, ಗ್ರಾಮೀಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ರಾಮೇಶ್‌ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !