ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಗೆಲುವು ನಿಶ್ಚಿತ: ಶಾಸಕ ಸ್ವರೂಪ್‌

ಮೈತ್ರಿ ಅಭ್ಯರ್ಥಿ ಪರ 30 ಗ್ರಾಮಗಳಲ್ಲಿ ಮತಯಾಚನೆ
Published 18 ಏಪ್ರಿಲ್ 2024, 14:30 IST
Last Updated 18 ಏಪ್ರಿಲ್ 2024, 14:30 IST
ಅಕ್ಷರ ಗಾತ್ರ

ಹಾಸನ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶಾಸಕ ಸ್ವರೂಪ್, ಹಾಸನ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಪ್ರಚಾರ ನಡೆಸಿದರು.

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೂವಿನಹಳ್ಳಿ ಕಾವಲು, ಹರಳಹಳ್ಳಿ, ಕುಪ್ಪಳ್ಳಿ, ಹಂದಿನಕೆರೆ, ಹೂವಿನಹಳ್ಳಿ, ಕಿಂಡಿಪುರ ಕೊಪ್ಪಲು, ಹೊಸೂರು ಕೊಪ್ಪಲು, ಕಿಂಡಿಪುರ, ಹೊಸೂರು, ನಂಜದೇವರ ಕಾವಲು, ಕೋರಹಳ್ಳಿ, ಅಗಲಹಳ್ಳಿ ಉದ್ದೂರು ಕೊಪ್ಪಲು ಅಗಲಹಳ್ಳಿ ಕೊಪ್ಪಲು, ಮಲ್ಲೇನಹಳ್ಳಿ, ಜನಿವಾರ, ಅರೆಕಲ್ಲು ಹೊಸಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವ ಮೂಲಕ ಪ್ರಜ್ವಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೂವಿನಹಳ್ಳಿ ಕಾವಲ್‌ ಸುತ್ತಲಿನ ಗ್ರಾಮಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದೇವೆ ಎಂದರು.

ಜೆಡಿಎಸ್ ನಾಯಕರು ಜಿಲ್ಲೆಯಲ್ಲಿ ಮಾಡಿರುವ ಕೆಲಸಗಳನ್ನು ಆಧರಿಸಿ, ಜಿಲ್ಲೆಯ ಜನರ ಬಳಿ ಪ್ರಜ್ವಲ್ ಪರ ಮತ ಕೇಳುತ್ತಿದ್ದೇವೆ. ಉತ್ತಮ ಜನಸ್ಪಂದನೆ ವ್ಯಕ್ತವಾಗಿದ್ದು, ಈ ಬಾರಿ ಮತ್ತೆ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ಹೆಚ್ಚುವರಿಯಾಗಿ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಜಿಲ್ಲೆಯ ಜನರು ಕೂಡ ಪ್ರಜ್ವಲ್ ರೇವಣ್ಣ ಪರ ಒಲವು ತೋರಿದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ, ಆಗಲಹಳ್ಳಿ ಯೋಗೇಶ್, ಎತ್ತಿನಕಟ್ಟೆ ಬಾಲಕೃಷ್ಣ, ಉದ್ಯಮಿ ಮಂಜಣ್ಣ, ನಗರಸಭಾ ಸದಸ್ಯ ರಫೀಕ್, ಹೊಸೂರು ರಘು, ರವಿ, ಸೋಮು ಮಣಚನಹಳ್ಳಿ, ಸಂತೋಷ್, ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT