ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆ ಚುರುಕು: ಅರ್ಧದಷ್ಟು ಮಾರಾಟ

ಸಂತೋಷ್‌ ಸಿ.ಬಿ.
Published 26 ಮೇ 2024, 5:03 IST
Last Updated 26 ಮೇ 2024, 5:03 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಆರಂಭವಾಗಿರುವ ಕೊಬ್ಬರಿ ಖರೀದಿ ನಿಧಾನವಾಗಿ ಚುರುಕು ಪಡೆಯುತ್ತಿದೆ. ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿರುವ ಖರೀದಿ ಪ್ರಕ್ರಿಯೆಯಲ್ಲಿ ಗುರಿಯ ಅರ್ಧದಷ್ಟು ಕೊಬ್ಬರಿ ಖರೀದಿ ಮಾಡಲಾಗಿದೆ.

ಜಿಲ್ಲೆಯ 15 ಕೊಬ್ಬರಿ ಖರೀದಿ ಕೇಂದ್ರದಲ್ಲಿ 18,879 ರೈತರು 2,20,924 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಇಲ್ಲಿಯವರೆಗೆ 4,835 ರೈತರು 1,03,598 ಕ್ವಿಂಟಲ್ ಕೊಬ್ಬರಿ ಮಾರಾಟ ಮಾಡಿದ್ದಾರೆ. 14,048 ರೈತರಿಂದ 1,17,326 ಕ್ವಿಂಟಲ್ ಕೊಬ್ಬರಿ ಖರೀದಿ ಬಾಕಿ ಇದೆ.

ಇನ್ನೂ ಕೆಲ ದಿನಗಳಲ್ಲಿಯೇ ಖರೀದಿ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಸದ್ಯ ನಿತ್ಯ 5ಸಾವಿರದಿಂದ 6 ಸಾವಿರ ಕ್ವಿಂಟಲ್ ಖರೀದಿ ನಾಫೆಡ್ ಮೂಲಕ ಮಾಡಲಾಗುತ್ತಿದೆ.

ಹಾಸನ ತಾಲ್ಲೂಕಿನಲ್ಲಿ 6,265 ಕ್ವಿಂಟಲ್‌, ಅರಸೀಕೆರೆ ತಾಲ್ಲೂಕಿನಲ್ಲಿ 36,232 ಕ್ವಿಂಟಲ್‌, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 52,496 ಕ್ವಿಂಟಲ್, ಹೊಳೆನರಸೀಪುರ ತಾಲ್ಲೂಕಿನಲ್ಲಿ 8,603 ಕ್ವಿಂಟಲ್‌ ಕೊಬ್ಬರಿ ಖರೀದಿ ಮಾಡಲಾಗಿದೆ.

ಕೆಲ ತಿಂಗಳ ಹಿಂದೆ ಕೊಬ್ಬರಿ ಬೆಳೆಗಾರರು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿದ್ದು, ಈಗಾಗಲೇ ಖರೀದಿ ಆರಂಭವಾಗಿದೆ. ಕೇಂದ್ರ ಸರ್ಕಾರದಿಂದ ನಾಫೆಡ್‌ ಮೂಲಕ ₹ 12ಸಾವಿರ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ₹1,500 ಸೇರಿದಂತೆ ಕ್ವಿಂಟಲ್‌ಗೆ ₹13,500 ದರ ಸಿಗುತ್ತಿದೆ.

ಮಾರ್ಚ್ 4 ರಿಂದ ಕೇಂದ್ರ ಸರ್ಕಾರದಿಂದ ನಿಗದಿತ ಪ್ರಮಾಣದ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದ್ದು, ಸುಮಾರು ಎರಡು ತಿಂಗಳು ಈ ಪ್ರಕ್ರಿಯೆ ನಡೆದಿದೆ. ಎಕರೆಗೆ 6 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್‌ವರೆಗೂ ಉಂಡೆ ಕೊಬ್ಬರಿ ಖರೀದಿ ಮಾಡಲಾಗುತ್ತಿದೆ. ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನ ದುದ್ದ, ಅರಸೀಕೆರೆ ತಾಲ್ಲೂಕಿನ ಅರಸೀಕೆರೆ ನಗರದ ಎಪಿಎಂಸಿ, ಬಾಣಾವರ, ಜಾವಗಲ್, ಜೆ.ಸಿ.ಪುರ, ಗಂಡಸಿ, ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು, ಚನ್ನರಾಯಪಟ್ಟಣ ನಗರ, ಹಿರಿಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ, ಉದಯಪುರ, ಹೊಳೆನರಸೀಪುರ ಪಟ್ಟಣದ ಕೇಂದ್ರಗಳಲ್ಲಿ ಖರೀದಿ ಮಾಡಲಾಗುತ್ತಿದೆ.

ನಾಫೆಡ್ ಮೂಲಕ ಖರೀದಿ ಪ್ರಾರಂಭ ಮಾಡಿರುವುದರಿಂದ ನಮಗೆ ಉತ್ತಮ ದರ ದೊರಕಿದ್ದು ವರ್ಷ ಪೂರ್ತಿ ಖರೀದಿ ಮಾಡಿದರೆ ಹೆಚ್ಚು ಅನುಕೂಲ
ರುದ್ರಮೂರ್ತಿ, ತೆಂಗು ಬೆಳೆಗಾರ
ಚೀಲ ಕೊರತೆಯಿಂದ ಕೆಲ ಕೇಂದ್ರಗಳಲ್ಲಿ ತೊಂದರೆಯಾಗಿತ್ತು ಈಗ ಸರಿಪಡಿಸಲಾಗಿದ್ದು ಹಂತ ಹಂತವಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಎಂ. ಮಂಜುನಾಥ್, ಮಾರ್ಕೆಟಿಂಗ್ ಫೆಡರೇಷನ್‌ ಅಧಿಕಾರಿ

ಕೊಬ್ಬರಿ ಖರೀದಿ ವಿವರ

(ಮೇ 23ರವರೆಗೆ) (ಕ್ವಿಂಟಲ್‌) ಖರೀದಿ ಕೇಂದ್ರ; ನೋಂದಣಿ; ಖರೀದಿ; ಬಾಕಿ ದುದ್ದ; 1077; 6265; 6025 ಅರಸೀಕೆರೆ 1; 1093; 7788; 4808 ಅರಸೀಕೆರೆ 2; 741; 4118; 4226 ಅರಸೀಕೆರೆ 3; 558; 3196; 2870 ಅರಸೀಕೆರೆ 4; 291; 299; 3105 ಅರಸೀಕೆರೆ 5; 349; 339; 3645 ಬಾಣಾವರ; 1555; 4913; 13055 ಜಾವಗಲ್; 1190; 5116; 9089 ಜಾವಗಲ್‌ 2; 227; 29; 2445 ಜೆ.ಸಿ.ಪುರ; 1015; 2044; 10157 ಗಂಡಸಿ; 1426; 8364; 8042 ಬಾಗೂರು; 1044; 6504; 6085 ಬಾಗೂರು 2; 112; 379; 1012 ಚನ್ನರಾಯಪಟ್ಟಣ1; 941; 5825; 5343 ಚನ್ನರಾಯಪಟ್ಟಣ 2; 690; 2843; 5141 ಚನ್ನರಾಯಪಟ್ಟಣ 3; 650; 2919; 4607 ಹಿರೀಸಾವೆ; 1359; 9415; 7100 ನುಗ್ಗೇಹಳ್ಳಿ; 1036; 7672; 4652 ಶ್ರವಣಬೆಳಗೊಳ; 1138; 6800; 6848 ಶ್ರವಣಬೆಳಗೊಳ 2; 165; –; 1905 ಉದಯಪುರ; 1020; 10135; 1386 ಹೊಳೆನರಸೀಪುರ; 1202; 8603; 5771 ಒಟ್ಟು; 18879; 103598; 117326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT