ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ | ಗುರಿ ಇಲ್ಲದ ಜೀವನ ವ್ಯರ್ಥ: ಸಾಹಿತಿ ಕೃಷ್ಣೇಗೌಡ

Published 10 ಫೆಬ್ರುವರಿ 2024, 13:22 IST
Last Updated 10 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ (ಎಸ್.ಎಲ್. ಭೈರಪ್ಪ ವೇದಿಕೆ): ಗುರಿ ಇಲ್ಲದ ಜೀವನ ವ್ಯರ್ಥ ಎಂದು ಸಾಹಿತಿ ಕೃಷ್ಣೇಗೌಡ ಹೇಳಿದರು.

ಕಲ್ಕೆರೆಯಲ್ಲಿ ಏರ್ಪಡಿಸಿದ್ದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜೀವನಕ್ಕೆ ಹಣಬೇಕು, ಆದರೆ ಎಲ್ಲವು ಹಣದಿಂದಲೇ ನಿರ್ಧಾರವಾಗುವುದಿಲ್ಲ. ಮನುಷ್ಯನಿಗೆ ಸಾಮಾಜಿಕ, ಭಾವನಾತ್ಮಕ ಮತ್ತು ಅಧ್ಯಾತ್ಮದ ಆರೋಗ್ಯ ಮುಖ್ಯವಾದುದು. ಇನ್ನೊಬ್ಬರ ಯಶಸನ್ನು ಕಂಡು ಆಸ್ವಾಧಿಸಬೇಕು ಎಂದು ಹೇಳಿದರು.

ಅಂತರಂಗದಲ್ಲಿರುವ ಒಳಿತನ್ನು ಸಾಹಿತ್ಯ ಬಿಂಬಿಸುತ್ತದೆ. ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಕ್ಷೇತ್ರ ಸಮೃದ್ಧವಾಗಿದೆ ಎಂದು ತಿಳಿಸಿದರು.

ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮಾತನಾಡಿ. ಮನೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಇಡಬೇಕು. ಎಲ್ಲರು ಪುಸ್ತಕಗಳನ್ನು ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.

ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಎಚ್.ಎಲ್. ಮಲ್ಲೇಶಗೌಡ,  ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಹೋಬಳಿ ಘಟಕದ ಅಧ್ಯಕ್ಷ ಎಸ್.ಪಿ. ದಯಾನಂದ್, ಮುಖಂಡ ಗೋವಿಂದೇಗೌಡ ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಎನ್. ಬೋರಲಿಂಗಯ್ಯ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್. ಲೋಕೇಶ್, ಗಂಗೇಗೌಡ, ಡಾ. ಸಂದೀಪ್, ಕಲಾವಿದೆ ಬನುಮಾ, ಎ.ಎಚ್. ಯೋಗೇಶ್, ರಂಗನಾಥ್, ಧರ್ಮರಾಜು, ಭೈರೇಗೌಡ ಭಾಗವಹಿಸಿದ್ದರು.

ನಂತರ ಅಪ್ಪಗೆರೆ ತಿಮ್ಮರಾಜು ಜಾನಪದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕಿ ಬನುಮಾ ಗೀತೆಗಳನ್ನು ಹಾಡಿ ರಂಜಿಸಿದರು. ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT