ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ: ಎಚ್‌.ಡಿ. ದೇವೇಗೌಡ ಪತ್ರ

ಸಿ.ಎಂ, ಆರೋಗ್ಯ ಸಚಿವರಿಗೆ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಪತ್ರ
Last Updated 28 ಏಪ್ರಿಲ್ 2021, 16:08 IST
ಅಕ್ಷರ ಗಾತ್ರ

ಹಾಸನ: ಎರಡು ವಾರದ ಕರ್ಫ್ಯೂನಿಂದ ಬಾಧಿತವಾಗಿರುವ ಕೂಲಿ ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್
ನೀಡಬೇಕು ಹಾಗೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಮುಖ್ಯಮಂತ್ರಿ, ಆರೋಗ್ಯ ಸಚಿವ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ರಾಜ್ಯಸಭಾ ಸದಸ್ಯಎಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಗೌಡರು, ಪ್ರಸ್ತುತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ
ಮೂಲ ಸೌಕರ್ಯಗಳಿಂದ ಕೊರೊನಾ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಲು ಸಾಕಾಗುತ್ತಿಲ್ಲ. ಒಂದು ಜಿಲ್ಲಾಸ್ಪತ್ರೆ, ಏಳು ತಾಲ್ಲೂಕು ಆಸ್ಪತ್ರೆ, 15 ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ 2030 ಹಾಸಿಗೆಗಳು ಲಭ್ಯವಿದ್ದು, ಈ ಪೈಕಿ 855 ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ಜಿಲ್ಲೆಯ 11 ಖಾಸಗಿ ಆಸ್ಪತ್ರೆಗಳಲ್ಲಿ 504 ಹಾಸಿಗೆಗಳನ್ನು ಸೋಂಕಿತರಿಗೆ ಇರಿಸಲಾಗಿದೆ ಎಂದು ವಿವರಿಸಿದ್ದಾರೆ‌.

ಹಿಮ್ಸ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು 13 ಸಾವಿರ ಕಿಲೋ ಲೀಟರ್‌ ಸಾಮರ್ಥ್ಯದ ಆಕ್ಸಿಜನ್ ಘಟಕದ ವ್ಯವಸ್ಥೆ ಇದ್ದರೂ ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಸರಬರಾಜು ಮಾಡಲು ಜಂಬೋ ಆಕ್ಸಿಜನ್‌ ಸಿಲಿಂಡರ್‌ ಸರಬರಾಜು ವ್ಯವಸ್ಥೆ ತುರ್ತಾಗಿ ಮಾಡಬೇಕಾಗಿದೆ.

ನಿತ್ಯ ಅಂದಾಜು 800 ರಿಂದ 1000 ಜನರಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಹಾಗಾಗಿ ನಿತ್ಯ 500 ಜನರಿಗೆ ರೋಗ ನಿರೋಧಕ ರೆಮ್‌ಡಿಸಿವಿರ್‌ ಚುಚ್ಚುಮದ್ದು ನೀಡುವುದು ಅವಶ್ಯಕ. ಪ್ರಸ್ತುತ 126 ವಯಲ್‌ ರೆಮಿಡಿಸಿವಿರ್‌ ಇಂಜಕ್ಷನ್ ಲಭ್ಯ ಇದೆ. ತುರ್ತಾಗಿ 10 ಸಾವಿರ ವಯಲ್‌ ರೆಮಿಡಿಸಿವಿರ್‌ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಎರಡು ವಾರಗಳ ಕರ್ಫ್ಯೂ ವಿಧಿಸಿರುವುದರಿಂದ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಮನೆಗೆಲಸದವರು,
ನಿರ್ಗತಿಕರು ಆಹಾರವಿಲ್ಲದೆ ಪೇಚಾಡುತ್ತಾರೆ. ಇಂತಹ ವರ್ಗಕ್ಕೆ ಸೇರಿದವರ ಸಂಕಷ್ಟ ಬಗೆಹರಿಸಲು ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ, ಗೋದಿ ಮತ್ತು ರಾಗಿ ವಿತರಿಸಬೇಕು. ಅಲ್ಲದೇ ಅವರ ಬ್ಯಾಂಕ್ ಖಾತೆಗೆ ಕನಿಷ್ಟ ₹2 ಸಾವಿರ ಸಹಾಯಧನಜಮಾ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT