ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pulse Polio | ಆಲೂರು ಶೇ 92 ಗುರಿ ಸಾಧನೆ

Published 3 ಮಾರ್ಚ್ 2024, 12:28 IST
Last Updated 3 ಮಾರ್ಚ್ 2024, 12:28 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ 6,011 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದ್ದು ಶೇ 92 ಗುರಿ ಸಾಧಿಸಲಾಗಿದೆ. ಸಾರ್ವಜನಿಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್‍ಫಾತಿಮಾ ತಿಳಿಸಿದರು.

ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರದಲ್ಲಿ 42, ಪಟ್ಟಣದಲ್ಲಿ 4, ಅಂಗನವಾಡಿಗಳಲ್ಲಿ 29 ಬೂತ್, ಶಾಲೆಗಳಲ್ಲಿ 4, ಬಸ್ ನಿಲ್ದಾಣ ಸೇರಿದಂತೆ ಇತರೆ 13 ಕೇಂದ್ರಗಳಲ್ಲಿ ಬೂತ್‍ಗಳನ್ನು ತೆರೆಯಲಾಗಿದೆ. ಒಂದು ಬೂತ್‍ನಲ್ಲಿ ಎರಡು ತಂಡಗಳಿರುತ್ತವೆ. 184 ಲಸಿಕಾದಾರರು, 74 ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದರು.

ಮಲೆನಾಡು ಪ್ರದೇಶದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳನ್ನು ಬೆಳೆಗಾರರು ತಮ್ಮ ವಾಹನದಲ್ಲಿ ಪೋಲಿಯೊ ಕೇಂದ್ರಕ್ಕೆ ಕರೆತಂದು ಹನಿ ಹಾಕಿಸುವ ಮೂಲಕ ಸಹಕಾರ ನೀಡಿದರು. ಅಬ್ಬನ, ದೈತಾಪುರ ಮತ್ತು ದಾಟೂರು ಕುಗ್ರಾಮಗಳಾಗಿದ್ದು, ಕಾರ್ಯಕರ್ತರು ಅಲ್ಲಿಗೇ ತೆರಳಿ ಲಸಿಕೆ ಹಾಕಿದರು. ಬೆಳಿಗ್ಗೆ 10.40 ಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಬಂದಿಳಿದ 6 ಮಕ್ಕಳಿಗೆ ಹನಿ ಹಾಕಲಾಯಿತು. ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಪೋಷಕರು ತಪ್ಪದೆ ಪೋಲಿಯೊ ಹನಿ ಹಾಕಿಸಿ ಎಂದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್, ಮಗುವಿಗೆ ಪೋಲಿಯೊ ಹನಿ ಹಾಕಿಸುವುದರಿಂದ ದೇಹದಲ್ಲಿ ಪೋಲಿಯೊ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ. ವೈರಸ್‌ಗಳು ಶರೀರದ ಮೇಲೆ ದಾಳಿ ಮಾಡಲು ಬಿಡುವುದಿಲ್ಲ ಮತ್ತು ವೈರಸ್‍ಗಳು ಬೆಳೆಯಲು ಅವಕಾಶ ಕೊಡುವುದಿಲ್ಲ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಈಗ ತಪ್ಪದೆ ಹಾಕಿಸಿ. ನಾಳೆಯಿಂದ ಎರಡು ದಿನ ಆರೋಗ್ಯ, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಹನಿ ಹಾಕುತ್ತಾರೆ ಎಂದರು.

ಆಲೂರು ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಮಕ್ಕಳಿಗೆ ತಾ. ಆರೋಗ್ಯಾಧಿಕಾರಿ ಡಾ. ನಿಸಾರ್‍ಫಾತಿಮ ರವರು ಪೋಲಿಯೊ ಹನಿ ಹಾಕಿದರು. 
ಆಲೂರು ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಮಕ್ಕಳಿಗೆ ತಾ. ಆರೋಗ್ಯಾಧಿಕಾರಿ ಡಾ. ನಿಸಾರ್‍ಫಾತಿಮ ರವರು ಪೋಲಿಯೊ ಹನಿ ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT