ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು: ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ

Published 19 ಮೇ 2024, 13:28 IST
Last Updated 19 ಮೇ 2024, 13:28 IST
ಅಕ್ಷರ ಗಾತ್ರ

ಕೊಣನೂರು: ಮಳೆರಾಯನ ಮುನಿಸಿನಿಂದ ಕಂಗೆಟ್ಟಿದ್ದ ರೈತಾಪಿ ಜನರು ಒಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಖುಶಿಯಾಗಿ ಕೃಷಿ ಕಾರ್ಯ ಚುರುಕುಗೊಳಿಸಿದ್ದಾರೆ.

ರಾಮನಾಥಪುರ, ಕೊಣನೂರು ಹೋಬಳಿಯಲ್ಲಿ ಹೊಗೆಸೊಪ್ಪು ಬೆಳೆಗಾರರು ಸಸಿ ನಾಟಿಯನ್ನು ಪೂರ್ಣಗೊಳಿಸಿದ್ದಾರೆ.  ನಾಟಿಮಾಡಿದ್ದ  ಬೆಳೆಗಾರರು ರಸಗೊಬ್ಬರ ನೀಡಿ ,ಕಳೆ ತೆಗೆಯುತ್ತಿದ್ದಾರೆ.

ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳು  ಮಳೆಯಿಂದಾಗಿ ಚೇತರಿಸಿಕೊಂಡಿವೆ. ಅಲೂಗಡ್ಡೆ, ಜೋಳ   ಬಿತ್ತನೆಗಾಗಿ ರೈತರು ಜಮೀನು ಹದಗೊಳಿಸುತ್ತಿದ್ದಾರೆ. ಶುಂಠಿಯ ಬೆಳೆ ಸುಧಾರಣೆ ಕಾಣುತ್ತಿದ್ದು , ಗೊಬ್ಬರ ನೀಡುವ, ಕಳೆ ತೆಗೆಯುವ ಮತ್ತು ಔಷಧಿ ಸಿಂಪಡಣೆ  ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT