ಶನಿವಾರ, ಜೂಲೈ 4, 2020
21 °C

ಹಳೇಬೀಡು: ಮನೆಗಳಿಗೆ ನುಗ್ಗಿದ ಚರಂಡಿ ನೀರು, ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3ರಿಂದ ಸುಮಾರು ಅರ್ಧ ಗಂಟೆ ಮಳೆ ಜೋರಾಗಿ ಸುರಿಯಿತು. ಎಸ್‌ವಿಪಿ ಬಾರ್ ಪಕ್ಕದ ರಸ್ತೆಯಲ್ಲಿ ಚರಂಡಿ ಕಟ್ಟಿದ ಪರಿಣಾಮ ಮಳೆ ನೀರು ಎರಡು ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯವರು ಪರದಾಡಿದರು.

ಚರಂಡಿ ನೀರು ವೃದ್ಧೆ ಲಕ್ಷ್ಮಮ್ಮ ಹಾಗೂ ಕಾಮತ್ ಅವರ ಮನೆಗೆ ನುಗ್ಗಿತ್ತು. ಸುತ್ತಮುತ್ತಲಿನ ನಿವಾಸಿಗಳು ಕಷ್ಟಪಟ್ಟು ಚರಂಡಿ ನೀರನ್ನು ಮುಂದೆ ಸಾಗಿಸಿದರು. ಹೀಗಾಗಿ ಮತ್ತಷ್ಟು ಮನೆಗಳಿಗೆ ನೀರು ನುಗ್ಗುವುದು ತಪ್ಪಿತು. ಪುಟ್ಟ ಮನೆಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕಲು ನಿಶ್ಯಕ್ತರಾದ ಲಕ್ಷ್ಮಮ್ಮ ಪಡಬಾರದ ಕಷ್ಟ ಅನುಭವಿಸಿದರು. ಕಾಮತ್ ಅವರೂ ಸಹ ಮಳೆ ನೀರನ್ನು ಮನೆಯಿಂದ ಹೊರಹಾಕಲು ಕಷ್ಟಪಟ್ಟರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಕೆ.ಶಿವಕುಮಾರ್ ಹಾಗೂ ಎಚ್.ಎಂ.ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ‘ಸರಾಗವಾಗಿ ನೀರು ಹರಿಯುವಂತೆ ಮಾಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು