ಗುರುವಾರ , ಮೇ 6, 2021
23 °C
ಹೊಸದಾಗಿ 73 ಜನರಿಗೆ ಕೊರೊನಾ ಸೋಂಕು

ಹಾಸನ: ಸಕ್ರಿಯ ಪ್ರಕರಣ 430ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 73 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದುವರೆಗೆ ಸೋಂಕಿತರ
ಸಂಖ್ಯೆ 29,470 ಏರಿಕೆಯಾಗಿದೆ.

430 ಸಕ್ರಿಯ ಪ್ರಕರಣಗಳ ಪೈಕಿ ತೀವ್ರ ನಿಗಾ ಘಟಕದಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ
ಬಿಡುಗಡೆಯಾದ 38 ಮಂದಿ ಸೇರಿದಂತೆ ಇದುವರೆಗೆ 28,568 ರೋಗಿಗಳು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾಯಿಲೆಯಿಂದ ಈವರೆಗೆ ಒಟ್ಟು 472 ಮಂದಿ ಮೃತರಾಗಿದ್ದಾರೆ.

ಹೊಸದಾಗಿ ಹಾಸನ ತಾಲ್ಲೂಕಿನಲ್ಲಿ 36 ಮಂದಿ, ಅರಸೀಕೆರೆ 12, ಚನ್ನರಾಯಪಟ್ಟಣ 14, ಅರಕಲಗೂಡು 2, ಬೇಲೂರು 3, ಹೊಳೆನರಸೀಪುರ 4, ಸಕಲೇಶಪುರ ತಾಲ್ಲೂಕಿನ ಇಬ್ಬರಿಗೆ ಕೋವಿಡ್‌ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು