ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕೆರೆ, ಎಂಟು ಪಾರ್ಕ್ ಅಭಿವೃದ್ಧಿ ಸಿದ್ಧತೆ

₹ 144 ಕೋಟಿ ವೆಚ್ಚದ ಯೋಜನೆ ಸಿದ್ಧ: ಶೀಘ್ರ ಕಾಮಗಾರಿ ಶುರು
Last Updated 29 ನವೆಂಬರ್ 2021, 15:54 IST
ಅಕ್ಷರ ಗಾತ್ರ

ಹಾಸನ: ಚನ್ನಪಟ್ಟಣ ಕೆರೆ ಸೇರಿದಂತೆ ನಗರ ಸುತ್ತಮುತ್ತಲಿನ ಆರು ಕೆರೆಗಳು ಹಾಗೂ ಎಂಟು ಉದ್ಯಾನಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದೆ.

ಇದಕ್ಕಾಗಿ ₹ 144 ಕೋಟಿ ವೆಚ್ಚದ ಯೋಜನೆ ಗೊರೂರಿನ ಹೇಮಾವತಿ ಜಲಾಶಯ ಯೋಜನೆ ವತಿಯಿಂದ ತಯಾರು ಮಾಡಲಾಗಿದ್ದು, ಶೀಘ್ರವೇ ಪಾರ್ಕ್ ಮತ್ತು ಕೆರೆ ಸೌಂದರ್ಯ ಹೆಚ್ಚಿಸುವಕಾಮಗಾರಿ ಆರಂಭವಾಗಲಿದೆ.

ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್, ವಿಜಯ ನಗರ ಪಾರ್ಕ್, ಹೌಸಿಂಗ್ಬೋರ್ಡ್ ಪಾರ್ಕ್, ಗಂಧದ ಕೋಠಿ ಪಾರ್ಕ್, ಹೊಯ್ಸಳ ಪಾರ್ಕ್, ಫ್ರೀಡಂ ಪಾರ್ಕ್, ಗಣೇಶಟೆಂಪಲ್ ಪಾರ್ಕ್ ಹಾಗೂ ಸಿಲ್ವರ್ ಜ್ಯುಬಿಲಿ ಪಾರ್ಕ್. ಚನ್ನಪಟ್ಟಣ ಕೆರೆ, ಗವೇನಹಳ್ಳಿ ಕೆರೆ,ಬೂವನಹಳ್ಳಿ ಕೆರೆ, ಸತ್ಯಮಂಗಲ ಕೆರೆ, ಹುಣಸಿನಕೆರೆ ಮತ್ತು ಗುಡ್ಡೇನಹಳ್ಳಿ ಕೆರೆ ಅಭಿವೃದ್ಧಿಪಟ್ಟಿಯಲ್ಲಿ ಸೇರಿವೆ.

ಯಾವುದಕ್ಕೆ ಎಷ್ಟು ಅನುದಾನ: ಮಹಾರಾಜ ಪಾರ್ಕ್‌ಗೆ ₹ 14.36 ಕೋಟಿನಿಗದಿಪಡಿಸಲಾಗಿದ್ದು, ಇದರಲ್ಲಿ 3 ಪ್ರವೇಶ ಕಮಾನು ಕ್ಯಾಬಿನ್ಸ್, ಮೂರಕ್ಕಿಂತ ಹೆಚ್ಚು ಪ್ರವೇಶದ್ವಾರ, 3 ಶೌಚಾಲಯ, 2 ವಿಶ್ರಾಂತಿ ಗೋಪುರ, ಇಂಟರ್‌ಲಾಕ್ ವಾಕಿಂಗ್‌ ಪಾತ್, 2 ತೆರೆದಜಿಮ್ ನೆಲಗಟ್ಟು, ಹಿಸ್ಟರಿ ಪಾರ್ಕ್ 1, ಬ್ಯಾಡ್ಮಿಂಟನ್ ಕೋರ್ಟ್ 4, ವಾಲಿಬಾಲ್ ಅಂಕಣ 2,ಮಕ್ಕಳ ಆಟದ ಯೂನಿಟ್ 2, ಜೈನ್‌ಲಿಂಗ್ ಫೆನ್ಸಿಂಗ್, ಯೋಗಾಲಯ 2, ಚೇಜಿಂಗ್ ರೂಂ1,ಮಹಿಳೆಯರಿಗೆ ಈಜುಕೊಳ1 ಹಾಗೂ ಸಂಗೀತ ಕಾರಂಜಿ ಮತ್ತು ನಿಯಂತ್ರಣ ಕೊಠಡಿಇರಲಿದೆ.

ವಿಜಯ ನಗರ ಪಾರ್ಕ್‌ಗೆ ₹ 4.61 ಕೋಟಿ ಮೀಸಲಿಡಲಾಗಿದ್ದು, ಪ್ರವೇಶ ಕಮಾನುಕ್ಯಾಬಿನ್ಸ್ 2, ಪ್ರವೇಶದ್ವಾರ 4, ವಿಶ್ರಾಂತಿ ಗೋಪುರ 1, ವಾಕಿಂಗ್ ಪಾಥ್, ತೆರೆದ ಜಿಮ್ ನೆಲಗಟ್ಟು2, ಬ್ಯಾಡ್ಮಿಂಟನ್‌ ಕೋರ್ಟ್ 2, ಮಕ್ಕಳ ಆಟದ ಸ್ಥಳ 1 ಯುನಿಟ್ ಹಾಗೂ 2 ಯೋಗಾಲಯನಿರ್ಮಾಣವಾಗಲಿದೆ.

ಹಾಗೆಯೇ ಹೌಸಿಂಗ್ ಬೋರ್ಡ್ ಪಾರ್ಕ್‌ಗೆ ₹1.78 ಕೋಟಿ, ಗಂಧದ ಕೋಟಿ ಪಾರ್ಕ್‌ಗೆ ₹4.26 ಕೋಟಿ, ಹೊಯ್ಸಳ ಪಾರ್ಕ್‌ಗೆ ₹ 3.72 ಕೋಟಿ, ಫ್ರೀಡಂ ಪಾರ್ಕ್‌ಗೆ ₹ 7.82ಕೋಟಿ, ಗಣೇಶ ಟೆಂಪಲ್ ಪಾರ್ಕ್‌ಗೆ ₹ 2.06 ಕೋಟಿ ಮತ್ತು ಸಿಲ್ವರ್ ಜ್ಯುಬಿಲಿ ಪಾರ್ಕ್‌ಗೆ₹ 4.40 ಕೋಟಿ ಹಂಚಿಕೆ ಮಾಡಲಾಗಿದೆ.

ನಗರದ ಹೊಸ ಬಸ್ ನಿಲ್ದಾಣ ಸಮೀಪದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹ 39.15 ಕೋಟಿಮೀಸಲಿಡಲಾಗಿದೆ. ಇದರಲ್ಲಿ ಎರಡು ಪ್ರವೇಶ ಕಮಾನು ಕ್ಯಾಬಿನ್ಸ್, ಎರಡು ಪ್ರವೇಶದ್ವಾರ ಮತ್ತುಶೌಚಾಲಯ, ವಿಶ್ರಾಂತಿ ಗೋಪುರ, ವಾಕಿಂಗ್ ಪಾಥ್, ತೆರೆದ ಜಿಮ್ ನೆಲಗಟ್ಟು 3, ಯೋಗಾಲಯ2, ಸಂಗೀತ ಕಾರಂಜಿ ಮತ್ತು ನಿಯಂತ್ರಣ ಕೊಠಡಿ 1, ಬಯಲು ರಂಗ ಮಂದಿರ, ಆಟಿಕೆ ಟ್ರೈನ್ಮತ್ತು ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

ಉಳಿದಂತೆ ಗವೇನಹಳ್ಳಿ ಕೆರೆಗೆ ₹ 6.65 ಕೋಟಿ, ಬೂವನಹಳ್ಳಿ ಕೆರೆಗೆ ₹ 5.54ಕೋಟಿ, ಸತ್ಯಮಂಗಲ ಕೆರೆಗೆ ₹ 11.42 ಕೋಟಿ ಹಂಚಿಕೆ ಮಾಡಲಾಗಿದ್ದು,ಯೋಗಾಲಯ, ವಿಶ್ರಾಂತಿ ಗೋಪುರ, ಪ್ರವೇಶ ದ್ವಾರ ಇರಲಿದೆ.

ಹಾಗೆಯೇ ಹುಣಸಿನಕೆರೆಗೆ ₹ 11.23 ಕೋಟಿ ಮತ್ತು ಗುಡ್ಡೇನಹಳ್ಳಿ ಕೆರೆಗೆ ₹ 3.36 ಕೋಟಿ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT