ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದಾ ನಿಮ್ಮ ಸೇವೆಯಲ್ಲಿ: ರೈಲ್ವೆ ಪೊಲೀಸ್ ಸೇವೆ ಆರಂಭ

ಅರಸೀಕೆರೆ ರೈಲ್ವೆ ಪೊಲೀಸರಿಂದ ವಿನೂತನ ಕಾರ್ಯಕ್ರಮ
Last Updated 28 ಜುಲೈ 2021, 4:14 IST
ಅಕ್ಷರ ಗಾತ್ರ

ಅರಸೀಕೆರೆ: ‘ರೈಲ್ವೆ ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಯಾಣಿಕರ ರಕ್ಷಣಾ ಹಿತದೃಷ್ಟಿಯಿಂದ ರೈಲ್ವೆ ಪೊಲೀಸರ ಮೊಬೈಲ್ ಸಂಖ್ಯೆಯನ್ನೊಳಗೊಂಡ ವಿಸಿಟಿಂಗ್ ಕಾರ್ಡ್ ವಿತರಿಸುವ ಮೂಲಕ ‘ಸದಾ ನಿಮ್ಮ ಸೇವೆಯಲ್ಲಿ ರೈಲ್ವೆ ಪೊಲೀಸ್’ ಎಂಬ ವಿನೂತನ ಸೇವೆಗೆಅರಸೀಕೆರೆ ರೈಲ್ವೆ ಪೊಲೀಸ್‌ರಿಂದ ಆರಂಭವಾಗಿದೆ.

ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ರೈಲ್ವೆ ಪಿಎಸ್‌ಐ ಮುದಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈಲ್ವೆ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರ ಸೂಚನೆಯಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ‘ಸದಾ ನಿಮ್ಮ ಸೇವೆಯಲ್ಲಿ ರೈಲ್ವೆ ಪೊಲೀಸರು’ ಎಂಬ ವಿನೂತನ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಹಗಲು ಮತ್ತು ರಾತ್ರಿ ವೇಳೆ ಮಹಿಳೆಯರು, ವಯೋವೃದ್ಧರು, ಅಸಹಾಯಕ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವುದು ಸಹಜ. ಆದರೆ, ರೈಲು ನಿಲ್ದಾಣ ಮತ್ತು ರೈಲು ಸಂಚಾರದ ಅವಧಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಥವಾ ಮಹಿಳೆಯರ ಬಳಿ ದುರ್ವರ್ತನೆ, ಕಳ್ಳತನ, ದರೋಡೆ, ಕೆಲವು ಸಂದರ್ಭಗಳಲ್ಲಿ ಕೆಲವರಿಗೆ ಪ್ರಾಯಾಣಕ್ಕೆ ಯಾವ ರೈಲು ಹತ್ತಬೇಕು ಎಂದು ತಿಳಿಯುವುದಿಲ್ಲ. ಮುಖ್ಯವಾಗಿ ತಾವು ಪ್ರಯಾಣಿಸುವ ರೈಲಿನ ಬದಲಿಗೆ ಬೇರೆ ರೈಲು ಏರಿ ಮಾರ್ಗ ಮಧ್ಯದಲ್ಲಿ ಪರದಾಡುವ ಪರಿಸ್ಥಿತಿ ನಮ್ಮ ರೈಲ್ವೆ ಪೊಲೀಸ್ ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸಲು ಈ ಯೋಜನೆ’ ಎಂದರು.

‘ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಹಾಗೂ ರೈಲು ನಿಲ್ದಾಣದಲ್ಲಿ ದಿನದ 24 ಗಂಟೆ ಅವಧಿಯಲ್ಲಿ ಯಾವುದೇ ಸಮಸ್ಯೆ ಎದುರಾದ ತಕ್ಷಣ ನಮ್ಮ ರೈಲ್ವೆ ಪೊಲೀಸರ ಮೊಬೈಲ್ ಸಂಖ್ಯೆಗೆ ಧೈರ್ಯವಾಗಿ ಫೋನ್ ಕರೆ ಮಾಡಬಹುದು, ನಮ್ಮ ಸೇವೆ ನಿಮಗೆ ಲಭ್ಯವಾಗುತ್ತದೆ. ಈ ನೂತನ ಸೇವಾ ಕಾರ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪಿಎಸ್ಐ ಮುದಿಯಪ್ಪ ಅವರ ನೇತೃತ್ವದಲ್ಲಿ ವಿಸಿಟಿಂಗ್ ಕಾರ್ಡ್ ವಿತರಿಸಲಾಯಿತು.

ಹೆಡ್‌ಕಾನ್‌ಸ್ಟೆಬಲ್ ರವಿಕುಮಾರ್, ಸಿಬ್ಬಂದಿ ಗುರುಮೂರ್ತಿ, ವಿನಯ್, ರವಿ, ಪ್ರೇಮಾ, ವಾಸು, ನಂದೀಶ್, ರಘು, ಸಂತೋಷ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT