ಹಾಸನ: ತಾಲ್ಲೂಕಿನ ಚಾಕೇನಹಳ್ಳಿ ಗ್ರಾಮದ ಚೆಕ್‌ಡ್ಯಾಂಗೆ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪುರುಷೋತ್ತಮ(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಿಲ್ಲೇನಹಳ್ಳಿ ಗ್ರಾಮದ ಕಾಂತರಾಜು– ನಾಗರತ್ನಾ ದಂಪತಿಯ ಪುತ್ ಪುರುಷೋತ್ತಮ, ಚಾಕೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತರಗತಿ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ತಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ವಸತಿ ಸಂಕೀರ್ಣದಲ್ಲಿ ಸರಣಿ ಕಳ್ಳತನ
ಹಾಸನ: ಇಲ್ಲಿನ ಪಶು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ವಸತಿ ಸಂಕೀರ್ಣದಲ್ಲಿ ಸರಣಿ ಕಳ್ಳತನ ಮಾಡಲಾಗಿದ್ದು, ಮೂರು ಮನೆಗಳ ಬೇಗ ಮರಿದು ಚಿನ್ನ, ಬೆಳ್ಳಿ, ನಗದು ಕಳವು ಮಾಡಲಾಗಿದೆ.
ಸಹಾಯಕ ಪ್ರಾಧ್ಯಾಪಕ ಚೇತನ್, ಗ್ರಂಥಪಾಲಕಿ ವಿಜಯಲಕ್ಷ್ಮಿ ಹಾಗೂ ಅಡುಗೆಯ ಗಣೇಶ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮಧ್ಯರಾತ್ರಿ ಮುಸುಕು ಧರಿಸಿ ಬಂದಿರುವ ಕಳ್ಳರು, ಯಾರು ಇಲ್ಲದ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.
60 ಗ್ರಾಂ ಚಿನ್ನ, 340 ಗ್ರಾಂ ಬೆಳ್ಳಿ ಹಾಗೂ ₹13ಸಾವಿರ ನಗದನ್ನು ಕಳವು ಮಾಡಿದ್ದಾರೆ. ನಂತರ ಚಪ್ಪಲಿ ಹಾಗೂ ಬಟ್ಟೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ಚಲನವನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂರನೇ ಬಾರಿ ಸಿಬ್ಬಂದಿ ವಸತಿ ಸಂಕೀರ್ಣದಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈದಿಗಳ ಬಳಿ ₹38,080 ನಗದು ಪತ್ತೆ
ಹಾಸನ: ಸಕಲೇಶಪುರ ತಾಲ್ಲೂಕಿನ ಕೌಡಳ್ಳಿ ಗ್ರಾಮದ ಉಪ ಕಾರಾಗೃಹದಲ್ಲಿರುವ ಕೈದಿಗಳ ಬಳಿ ₹38,080 ನಗದು ಪತ್ತೆಯಾಗಿದೆ.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಪರಮೇಶ, ಅವರು ಸಿಬ್ಬಂದಿಯೊಂದಿಗೆ ಉಪ ಕಾರಾಗೃಹದ ಕೈದಿಗಳು ಹಾಗೂ ಅವರ ಕೊಠಡಿಗಳ ತಪಾಸಣೆ ನಡೆಸಿದ್ದಾರೆ. ಈ ಸಮಯದಲ್ಲಿ 16 ಕೈದಿಗಳ ಬಳಿ ಒಟ್ಟು ₹ 38,080 ನಗದು ದೊರೆತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಅಧೀಕ್ಷಕ ಬಿ.ಎ.ಹಿರುನವರ್ ಅವರು, ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.