ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಸ್ಥಾನಗಳ ಲೋಕಾರ್ಪಣೆ ನಾಳೆ

Published 17 ಮೇ 2024, 18:31 IST
Last Updated 17 ಮೇ 2024, 18:31 IST
ಅಕ್ಷರ ಗಾತ್ರ

ಹಿರೀಸಾವೆ: ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರ ಮಾಡಿರುವ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಭಾನುವಾರ ನಡೆಯಲಿದೆ.

ಶನಿವಾರ ಬೆಳಿಗ್ಗೆ ವಿವಿಧ ಪೂಜೆಗಳು ಮತ್ತು ಹೋಮಗಳು ಜರುಗಲಿವೆ. ಭಾನುವಾರ  ವಿವಿಧ ಹೋಮಗಳು ,  ಪ್ರಾಣ ಪ್ರತಿಷ್ಠಾಪನೆ, ಮಾಹಾ ಕುಂಭಾಭಿಷೇಕ ನಡೆಲಿದೆ.  ಶಾಸಕ ಸಿ.ಎನ್. ಬಾಲಕೃಷ್ಣ, ಕ.ವಿ.ಕಾ. ಅಧ್ಯಕ್ಷ ಲಲಿತ್ ರಾಘವ್,  ತಹಶೀಲ್ದಾರ್ ಗೋವಿಂದರಾಜು, ಗೋಪಾಲಸ್ವಾಮಿ, ಎಚ್.ಸಿ. ಅನಂತಸ್ವಾಮಿ,  ಆನಂದ್,  ರಾಮಚಂದ್ರ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರುಭಾಗವಹಿಸುವರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮತಿಘಟ್ಟ ದೇವಾಲಯ: ಹಿರೀಸಾವೆ ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಪುನರ್ ನಿರ್ಮಾಣ ಮಾಡಿರುವ ಚನ್ನಿಗರಾಯ ಸ್ವಾಮಿ ದೇವಾಲಯದ ಉದ್ಘಾಟನೆ ಭಾನುವಾರ ನಡೆಯಲಿದೆ.

ದೇವಸ್ಥಾನದ ಲೋಕಾರ್ಪಣೆ ಪ್ರಯುಕ್ತ ಶನಿವಾರ ಶಾಂತಿ ಮತ್ತು ಮಂಡಲ ಪೂಜೆ, ಕಲಶಾರಾಧನೆ, ಸುದರ್ಶನ, ನವಗ್ರಹ, ದೀಕ್ಷಾ, ಹೋಮಗಳು ನಡೆಯಲಿವೆ. ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಗೋಪುರಕ್ಕೆ ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಕಳಾ ಹೋಮ, ಮಹಾ ಪೂರ್ಣಾಹುತಿ, ಕುಂಭಾಭಿಷೇಕ ಜರುಗಲಿವೆ. ಶಾಸಕ ಸಿ.ಎನ್. ಬಾಲಕೃಷ್ಣ, ಪ್ರಮುಖರಾದ ಗೋಪಾಲಸ್ವಾಮಿ,  ದೇವರಾಜು,  ರಂಗೇಗೌಡ ,  ನಾಗರಾಜಯ್ಯ  ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT